ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಗಣೇಶೋತ್ಸವದ ಪ್ರಯುಕ್ತ 50 ಪೈಸೆ ಅಂಚೆ ಕಾರ್ಡ್ನಲ್ಲಿ ಶ್ರೀ ಗಣೇಶನ ಚಿತ್ರ ಬರೆಯುವ “ಅಂಚೆ ಕುಂಚ” ಉಚಿತ ರಾಜ್ಯ ಮಟ್ಟದ ಸ್ಪರ್ಧೆಯ ಫಲಿತಾಂಶ ಈ ಕೆಳಕಂಡಂತಿದೆ ಎಂದು ತೀರ್ಪುಗಾರರಲ್ಲಿ ಒಬ್ಬರಾದ ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಒಂದು ಸಾವಿರದ ಒಂದುನೂರ ಇಪ್ಪತ್ತೊಂದು (1121) ಕಾರ್ಡ್ ಬಂದಿದ್ದು ವಯಸ್ಸಿನ ಅನುಗಣವಾಗಿ ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ. ಸ್ಪರ್ಧೆಯ ನಿಯಮದ ಪ್ರಕಾರ ಯಾವುದೇ ಸಭೆ, ಸಮಾರಂಭ ಇಲ್ಲದೇ ವಿಜೇತರಾದ ಸ್ಪರ್ಧಿಗಳಿಗೆ ಅವರು ಕೊಟ್ಟ, ವ್ಯಾಟ್ಸಪ್‌ಗೆ ಅವರವರ ಫಲಿತಾಂಶ, ಅಭಿನಂದನಾ ಪತ್ರ ಕಳಿಸುತ್ತೇವೆಂದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಕಟಿಸಿದ್ದಾರೆ.
ಪ್ರಾಥಮಿಕ ಕಿರಿಯರ ವಿಭಾಗ ಪ್ರಥಮ ಬಹುಮಾನಗಳು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ನಾರಾಯಣ ಮನೋಹರ ಪೈ, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮದ ಸಾನ್ವಿ ವಸಂತ ನಾಯರಿ, ದಾವಣಗೆರೆಯ ಮಾನ್ಯ ಸಂದೀಪ್ ಶೆಣೈ. ದ್ವಿತೀಯ ಬಹುಮಾನಗಳು ಧಾರವಾಢ ಜಿಲ್ಲೆ ಹುಬ್ಬಳ್ಳಿಯ ಸಾನ್ವಿ ಯರಗೊಪ್ಪ, ಮುಂಡರಗಿಯ ಐಶ್ವರ್ಯ ಹಿರೇಗೌಡರ್, ಮಂಗಳೂರಿನ ಬಲ್ಮಠದ ತ್ರಿನಯ್ ಎಸ್.ಕುಮಾರ್, ಕಾಟಾಪುರದ ಸ್ಪಂದನಾ ಕೊಳ್ಳಿ, ತೃತೀಯ ಬಹುಮಾನಗಳು ದಾವಣಗೆರೆಯ ಆರಾಧ್ಯ ಪ್ರವೀಣ ಪೈ, ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನ ವಂದನಾ ನಾರಾಯಣ ಗೌಡರ, ದಾವಣಗೆರೆಯ ಪರಿಣಿತ ಪಿ.ಶೆಣೈ, ಸಮಾಧಾನಕರ ಬಹುಮಾನಗಳು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ತನುಶ್ರೀ ಶ್ರೀಕಾಂತ್ ಪಾಸ್ತೆ, ಉಡುಪಿ ಜಿಲ್ಲೆಯ ಕುಂದಾಪುರದ ಮನಸ್ವಿ ಎಂ.ದೇವಾಡಿಗ, ದಾವಣಗೆರೆಯ ವಿರಾಟ್ ಪಿ.ಶೆಣೈ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಾಟಾಪುರದ ರಾಹುಲ್ ಯಮನೂರಪ್ಪ ಪೂಜಾರಿ, ಬೆಂಗಳೂರಿನ ಕೃತಿಕಾ ಜಿ.ಎಸ್. ದಾವಣಗೆರೆಯ ದೈವಿಕ್ ನಾಯಕ್ ಪಡೆದಿರುತ್ತಾರೆ.
ಪ್ರೌಢ ವಿಭಾಗ ಪ್ರಥಮ ಬಹುಮಾನಗಳು ಬೆಂಗಳೂರಿನ ನವ್ಯ ಮನೋಹರ ಪೈ, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟೇಶ್ವರ ಶರಧಿ ಶಿವಾನಂದ ಐತಾಳ್, ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಅನುಷ ಶ್ರೀನಿವಾಸ ವಂದಿಗೆ, ತೃತೀಯ ಬಹುಮಾನ ಬೆಂಗಳೂರಿನ ಸಿಂಚನಾ ತೋಳೂರು.
ಹಿರಿಯರ ವಿಭಾಗ ಪ್ರಥಮ ಬಹುಮಾನ ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಮತಿ ರೇಖಾ ರತ್ನಾಕರ ಶೆಣೈ, ದ್ವಿತೀಯ ಬಹುಮಾನ ವಿಜಯಪುರದ ಚಂದ್ರಶೇಖರ್ ಹಂಚಿನಾಳ್.
ತೃತೀಯ ಬಹುಮಾನ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗುರುಮೂರ್ತಿ ಭಾಗವತ್, ಸಮಾಧಾನಕರ ಬಹುಮಾನ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಎಮಲೂಟಿಯ ಅನಿಲ್‌ಕುಮಾರ್ ಬಿ.ಪಡೆದಿರುತ್ತಾರೆ ಕಲಾಕುಂಚ ಸಂಸ್ಥೆಯ ಪದಾಧಿಕಾರಿಗಳು, ಸರ್ವ ಸದಸ್ಯರು, ಬಹುಮಾನ ವಿಜೇತರಾದವರಿಗೆ ಅಭಿಮಾನದಿಂದ ಅಭಿನಂದಿಸಿ ಹಾರೈಸಿದ್ದಾರೆ.