ವರದಿ ಸಂಗ್ರಹ: ಮಂದಾರ ರಾಜೇಶ್ ಭಟ್
ಭಾರತದ ಮಹಾಗೋಡೆ, ವಿಶ್ವದ ಎರಡನೆಯ ಮಹಾಗೋಡೆ, ಕುಂಭಳಗಢ ರಾಜಸ್ಥಾನ ರಾಜ್ಯದ ರಾಜಸಮಂದ್ ಜಿಲ್ಲೆಯಲ್ಲಿದೆ.ಇದು ಉದಯಪುರ ನಗರದಿಂದ ಸುಮಾರು 85 ಕಿ.ಮೀ ದೂರದಲ್ಲಿದೆ ಮತ್ತು ಅರಾವಳಿ ಬೆಟ್ಟಸಾಲಿನಲ್ಲಿ ನೆಲೆಗೊಂಡಿದೆ.

36 ಕಿಲೋಮೀಟರ್ ಉದ್ದ ಮತ್ತು ಅಗಲ ಸುಮಾರು 15 ಅಡಿ ಇದ್ದು ಇದನ್ನು “ಭಾರತದ ಮಹಾ ಗೋಡೆ” ಎಂದು ಕರೆಯುತ್ತಾರೆ. ಇದು ಚೀನಾದ ಮಹಾಗೋಡೆಯ ನಂತರದ ವಿಶ್ವದ ಎರಡನೇ ಅತೀ ಉದ್ದದ ನಿರಂತರ ಗೋಡೆ ಎಂದು ಪರಿಗಣಿಸಲಾಗಿದೆ.
ಮಹಾರಾಣಾ ಕುಂಭನು ಮೇವಾಡವನ್ನು ಆಳುವ ವೇಳೆ ಸುಮಾರು 32 ಕೋಟೆಗಳನ್ನು ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ. ಅದರಲ್ಲಿ ಅತ್ಯಂತ ಭದ್ರವಾದ ಮತ್ತು ಪ್ರಸಿದ್ಧವಾದ ಕೋಟೆ ಕುಂಭಳಗಢ. ಇಂದಿಗೆ ಇದು ಯುನೆಸ್ಕೊ ವಿಶ್ವ ಪರಂಪರೆ ತಾಣ ಪಟ್ಟಿಗೆ ಸೇರಿದೆ.
ಕುಂಭಳಗಢದಲ್ಲಿ ಒಟ್ಟು 360ಕ್ಕೂ ಹೆಚ್ಚು ದೇವಸ್ಥಾನಗಳು ಇವೆ ಅದರಲ್ಲಿ ಸುಮಾರು 150 ಕ್ಕೂ ಹೆಚ್ಚು ಜೈನ ದೇವಸ್ಥಾನಗಳು,ಮತ್ತು ಸುಮಾರು 150 ರಷ್ಟು ಹಿಂದು ದೇವಸ್ಥಾನಗಳು ಇರಬಹುದು ಎನ್ನಲಾಗಿದ್ದು ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಮಹಾದೇವ ದೇವಸ್ಥಾನ ಎನ್ನುತ್ತದೆ. ಇತಿಹಾಸ ಕುಂಬಳಗಢ ಎಂಬ ಹೆಸರು ಬಂದದ್ದು ಮೇವಾಡದ ರಾಜ ಮಹಾರಾಣಾ ಕುಂಭ ಅವರ ಹೆಸರಿನಿಂದ ಬಂದಿದೆ. ಕುಂಭಳಗಢ ಪ್ರವೇಶಿಸಲು ಸುಮಾರು 7 ಬೃಹತ್ ಮಹಾ ದ್ವಾರಗಳಿವೆ.
ಕುಂಭಳಗಢ ಆಳ್ವಿಕೆ ಮೇವಾಡದ ಸಿಸೋಡಿಯ ವಂಶದ ರಾಜರ ಕಾಲದಲ್ಲಿ ಬಹಳ ಪ್ರಬಲವಾಗಿತ್ತು. ಇತಿಹಾಸ ಪ್ರಕಾರ ಮಹಾರಾಣಾ ಪ್ರತಾಪ (1540–1597)ರ ಕಾಲದಲ್ಲಿ ಉನ್ನತ ಮಟ್ಟದಲ್ಲಿತ್ತು 16–17ನೇ ಶತಮಾನಗಳಲ್ಲಿ ಮೊಘಲ್ ಆಕ್ರಮಣದಿಂದ ಪ್ರಭಾವ ಕಡಿಮೆಯಾಗತೊಡಗಿತು.ಮೇವಾಡದ ಮೇಲೆ ಮೊಘಲ್–ಮರಾಠ–ಬ್ರಿಟಿಷರ ಒತ್ತಡ ಹೆಚ್ಚಾದಂತೆ, ಆಡಳಿತ ಶಕ್ತಿ ಕ್ಷೀಣಿಸಿತು. 19ನೇ ಶತಮಾನದ ಆರಂಭದಲ್ಲಿ ಬ್ರಿಟಿಷರ ಆಳ್ವಿಕೆ ಬಲವಾಗಿ ಬಂದ ನಂತರ, ರಾಜರ ಆಳ್ವಿಕೆ ಇಲ್ಲಿ ಅಂತ್ಯವಾಯಿತ 2013ರಲ್ಲಿ ಕುಂಭಳಗಢವನ್ನು ಯುನೆಸ್ಕೋ ವಿಶ್ವ ಪರಂಪರೆ ತಾಣವೆಂದು ಘೋಷಿಸಲಾಯಿತು. ಪ್ರಸ್ತುತ ಕೋಟೆಯನ್ನು ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ನೋಡಿಕೊಳ್ಳುತ್ತಿದೆ ಪ್ರತಿ ವರ್ಷ ಕುಂಭಳಗಢ ಉತ್ಸವ ನಡೆಯುತ್ತದೆ ಜನಪದ ನೃತ್ಯ, ಸಂಗೀತ, ಸಂಸ್ಕೃತಿಕ ಕಾರ್ಯಕ್ರಮಗಳಿಂದ ಕುಂಬಳಗಢ ಇಂದಿಗೂ ಜೀವಂತವಾಗುತ್ತದೆ.