ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರ; ಶಿಕ್ಷಕರ ದಿನಾಚರಣೆ

0
84

ಜೇಸಿಐ ಉಪ್ಪುಂದ ಸುಪ್ರೀಮ್, ಲಯನ್ಸ್ ಕ್ಲಬ್ ನಾವುಂದ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಸರಕಾರಿ ಆಸ್ಪತ್ರೆ ಕಿರಿಮಂಜೇಶ್ವರ ಎಸ್.ಡಿ.ಎಂ ಸಮನ್ವಯ ವೇದಿಕೆ, ಬೈಂದೂರು ತಾಲೂಕು
ಇವರ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಸನ್ಮಾನ ಮತ್ತು ಕ್ರೀಡಾ ಸ್ಪರ್ಧೆ ಗುರುವಂದನಾ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರದಲ್ಲಿ ಸಂಭ್ರಮದಲ್ಲಿ ನೆಡೆಯಿತು.

ಶಾಸಕ ಗುರುರಾಜ್ ಗಂಟಿಹೊಳೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜಮುಖಿ ಕಾರ್ಯದ ಮೂಲಕ ಗುರುತಿಸಿಕೊಂಡು ಬಂದಂತಹ ಇಂತಹ ಹಲವಾರು ಸಂಘಟನೆ ಒಟ್ಟಾಗಿ ಒಂದು ಅದ್ಭುತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೀರಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದರು.

JFD. ಜ್ಯೋತಿ ಜಯರಾಮ ಶೆಟ್ಟಿ, ಅಧ್ಯಕ್ಷರು,ಜೇಸಿಐ ಉಪ್ಪುಂದ ಸುಪ್ರೀಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಯಿತು ಗೆದ್ದಂತ ಶಿಕ್ಷಕರಿಗೆ ಬಹುಮಾನವನ್ನು ವಿತರಿಸಲಾಯಿತು ಮತ್ತು ಪ್ರತಿಯೊಂದು ಶಿಕ್ಷಕರಿಗೂ ಸನ್ಮಾನಿಸಿ ಗೌರವಿಸಲಾಯಿತು ಎಂದರು.

ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಶ್ರೀ ಗಿರೀಶ್ ಶ್ಯಾನುಭಾಗ್, ನಿವೃತ್ತ ಶಿಕ್ಷಕರು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶೇಖರ ಖಾರ್ವಿ, ಅಧ್ಯಕ್ಷರು, ಗ್ರಾಮ ಪಂಚಾಯತ್ ಕಿರಿಮಂಜೇಶ್ವರ, ನಾಗೇಶ ನಾಯ್ಕ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬೈಂದೂರು, ಕೃಷ್ಣಪೂಜಾರಿ, ಅಧ್ಯಕ್ಷರು ರೋಟರಿ ಕ್ಲಬ್ ಗಂಗೊಳ್ಳಿ ನಿತ್ಯಾನಂದ ಆಚಾರ್ಯ ಅಧ್ಯಕ್ಷರು ಲಯನ್ಸ್‌ ಕ್ಲಬ್ ನಾವುಂದ ,ಮಂಜು ಎಂ. ಪೂಜಾರಿ ಮುಖ್ಯ ಶಿಕ್ಷಕರು ಸರಕಾರಿ ಆಸ್ಪತ್ರೆ ಕಿರಿಮಂಜೇಶ್ವರ, ಭಾಸ್ಕರ ಖಾರ್ವಿ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರ,
ಸಂಪನ್ಮೂಲ ವ್ಯಕ್ತಿಗಳಾದ Dr ಸರೋಜ ಎಂ,JC ಹುಸೇನ್ ಹೈಕಾಡಿ,ಪದ್ಮನಾಭ ಹೆಬ್ಬಾರ್ ಹಳೆ ವಿದ್ಯಾರ್ಥಿ ಉಪಾಧ್ಯಕ್ಷರು, ರೇಖಾ ಗಣೇಶ್ ಹೊಸಾಡು sdmc ಕಾರ್ಯದರ್ಶಿ, ವಿವಿಧ ಸಂಘದ ಸಂಘ-ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

JFD. ಜ್ಯೋತಿ ಜಯರಾಮ ಶೆಟ್ಟಿ, ಅಧ್ಯಕ್ಷರು,ಜೇಸಿಐ ಉಪ್ಪುಂದ ಸುಪ್ರೀಮ್, ಸ್ವಾಗತಿಸಿದರು, JFD ಸುಮಾ ಆಚಾರ್, ಕಾರ್ಯಕ್ರಮದ ನಿರ್ದೇಶಕರು IPP JCI Uppunda Supreme
ನಿರೂಪಿಸಿದರು. ನಿತ್ಯಾನಂದ ಆಚಾರ್ಯ ಅಧ್ಯಕ್ಷರು ಲಯನ್ಸ್‌ ಕ್ಲಬ್ ನಾವುಂದ ವಂದಿಸಿದರು.

LEAVE A REPLY

Please enter your comment!
Please enter your name here