ರಾಜಸ್ಥಾನದಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ ಭಾರತ್ ನ ರಾಷ್ಟ್ರಮಟ್ಟದ ಯುನಿಫೀಲ್ಡ್ ಹ್ಯಾಂಡ್ ಬಾಲ್ ಕ್ರೀಡಾ ಕೂಟದಲ್ಲಿ ಕರ್ನಾಟಕ ತಂಡ ಬೆಳ್ಳಿಯ ಪದಕ ಪಡೆದಿದ್ದಾರೆ. ವಿಜೇತ ತಂಡದಲ್ಲಿ ಬೆಳುವಾಯಿ ಸ್ಪೂರ್ತಿ ವಿಶೇಷ ಶಾಲೆಯ ವಿದ್ಯಾರ್ಥಿನಿ ಸಹಳಾ ಭಾಗವಹಿಸಿ ಉತ್ತಮ ಸಾಧನೆಯನ್ನು ಪ್ರದರ್ಶಿಸಿದ್ದಳು. ಶಿಕ್ಷಕಿ ಸುಚಿತ್ರಾ ವಿದ್ಯಾರ್ಥಿನಿಯನ್ನು ತರಬೇತಿಗೊಳಿಸುವಲ್ಲಿ ಮುತುವರ್ಜಿ ವಹಿಸಿದ್ದರು. ಅವರೀರ್ವರನ್ನೂ ಸ್ಫೂರ್ತಿ ವಿಶೇಷ ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ