ಶ್ರೀ ಮಹಾವಿಷ್ಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೀಳಂಜೆ:ಅನಂತ ಚತುರ್ದಶಿ

0
60

ಶ್ರೀ ಮಹಾವಿಷ್ಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೀಳಂಜೆಯಲ್ಲಿ ಅಷ್ಟ ಮಂಗಲ ಪ್ರಶ್ನೆಯಲ್ಲಿ ತೋರಿಬಂದತೆ ದಿನಾಂಕ 06-09-2025 ರಂದು ಬೆಳಿಗ್ಗೆ ಶ್ರೀ ಹರಿಹರ ಕ್ಷೇತ್ರದಲ್ಲಿ ಅನಂತ ಚತುರ್ದಶಿಯಂದು ಅನಂತ ವೃತ ಪೂಜೆ (ನೋಂಪುಪೂಜೆ) ಹಾಗೂ ಕ್ಷೇತ್ರದ ಶ್ರೀ ಮಹಾವಿಷ್ಣುವಿನ ಸನ್ನಿಧಿಯಲ್ಲಿ ಹಾಲುಪಾಯಸ ಸೇವೆ,ಪಂಚಾಮೃತ ಅಭಿಷೇಕ, ನಾಗದೇವರಿಗೆ ತನು ತಂಬಿಲಸೇವೆ,ವಿಶೇಷ ಪೂಜೆ ಜರುಗಿತು.

ಈ ಸಂದರ್ಭದಲ್ಲಿ ದೇವಸ್ಥಾನದ ತಂತ್ರಿಗಳು, ಪ್ರದಾನ ಅರ್ಚಕರು,ಅರ್ಚಕ ವೃಂದ, ಜೀರ್ಣೋದ್ದಾರ ಸಮಿತಿಯ ಧಾರ್ಮಿಕ ಸಲಹೆಗರಾರು, ಅಧ್ಯಕ್ಷರು,ಕಾರ್ಯದರ್ಶಿ, ಉಪಾಧ್ಯಕ್ಷರು,ಸಂಘಟನಾ ಕಾರ್ಯದರ್ಶಿ,ಮಹಿಳಾ ಪದಾಧಿಕಾರಿಗಳು,ಉಪ ಕೋಶಧಿಕಾರಿ ಊರ ಪರ ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ಅನಂತಪದ್ಮನಾಭ ವೃತ ಪೂಜೆಯ ಪ್ರಸಾದ ಸ್ವೀಕರಿಸಿದರು.

ಅನಂತ ವೃತವು ಭಗವಾನ್ ವಿಷ್ಣುವನ್ನುಅನಂತ ರೂಪದಲ್ಲಿ ಆರಾಧಿಸುತ್ತದೆ, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವನ್ನು ಪಡೆಯುವ ಗುರಿಯನ್ನು ಈ ದಿನದಂದು ವಿಷ್ಣು ದೇವರು ಸಾವಿರಹೆಡೆಯ ಅನಂತ ಶೇಷನ ಮೇಲೆ ಶಯನಿಸುತ್ತಾರೆ ಎಂಬ ನಂಬಿಕೆಯಿದೆ, ಈ ದಿನದಂದು ಶ್ರದ್ಧಾ ಭಕ್ತಿಯಿಂದ ಅನಂತಪದ್ಮನಾಭನನ್ನು ಭಜಿಸಿದರೆ,ದೇವರು ಅವರ ಇಷ್ಟಾರ್ಥಗಳನ್ನು ಅದರಲ್ಲೂ ವಿಶೇಷವಾಗಿ ಸಂಪತ್ತು ಹಾಗೂ ಸಂತಾನಪ್ರಾಪ್ತಿಯನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇರುವ ಕಾರಣವಿರುವುದರಿಂದ ಸದ್ಭಕ್ತರು ಈ ವ್ರತವನ್ನು ಹಿಡಿಯಬಹುದಾಗಿದೆ,ಆದರೆ ಒಮ್ಮೆ ವೃತಮಾಡಲು ಸಂಕಲ್ಪ ಮಾಡಿದಲ್ಲಿ ಕನಿಷ್ಟಪಕ್ಷ 14 ವರ್ಷಗಳಾದರೂ ಅದನ್ನುಸತತವಾಗಿ ಬಿಡದೇ ಆಚರಿಸಬೇಕೆಂಬ ನಿಯಮವಿದೆ.

LEAVE A REPLY

Please enter your comment!
Please enter your name here