ಕೊರಗ ಅಭಿವೃದ್ಧಿ ಸಂಘ ಕುಕ್ಕುಂದೂರು ಉದ್ಘಾಟನೆ

0
110

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಕಾರ್ಕಳ ತಾಲೂಕಿನ ಕುಕ್ಕುಂದೂರು ವಲಯ ಮಟ್ಟದ ನೂತನ ಸಂಘವನ್ನು ಪೊಸನೊಟ್ಟು ಅಂಬೇಡ್ಕರ್ ಭವನದಲ್ಲಿ ಉದ್ಘಾಟಿಸಲಾಯಿತು. ನೂತನ ಸಂಘದ ಉದ್ಘಾಟನೆಯನ್ನು ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶಶಿಕಲಾ ಅವರು ದೀಪವನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ವೇದಿಕೆಯಲ್ಲಿ ಸಮುದಾಯದ ಹಿರಿಯರು ಸುಧಾಕರ ಹಾಗೂ ಗೋಪ ಇವರು ಡೋಲು ಬಾರಿಸುವ ಮೂಲಕ ಸಂಘಟನೆಗೆ ಚಾಲನೆ ನೀಡಿದರು. ಪ್ರಾಸ್ತಾವಿಕ ಸಂಘಟನೆಯ ಬಲವರ್ಧನೆ ಕುರಿತು ಹಾಗೂ ಸಂಘನೆ ಬೆಳೆದು ಬಂದ ಹಾದಿಯ ಕುರಿತು ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷರಾದ ಬೊಗ್ರ ಕೊರಗ ಕೊಕ್ಕರ್ಣೆ ಇವರು ಮಾಹಿತಿ ನೀಡಿದರು.

ನಂತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಚುನಾವಣಾ ಅಧಿಕಾರಿಯಾಗಿ ಒಕ್ಕೂಟದ ನಿಕಟ ಪೂರ್ವ ಕೋಶಾಧಿಕಾರಿ ಸತೀಶ್ ಪೆರ್ಡೂರು ಹಾಗೂ ಗೆಳೆಯರ ಬಳಗ ತಂಡದ ಅಧ್ಯಕ್ಷರು ಚಂದ್ರ ಕಳ್ತೂರು ನೆರವೇರಿಸಿದರು. ಅಧ್ಯಕ್ಷರಾಗಿ ಶಶಿಕಲಾ ಪಡ್ಯ ಉಪಾಧ್ಯಕ್ಷರು ಶ್ರೀ ಸುಧಾಕರ ಕುಕ್ಕುಂದೂರು, ಕಾರ್ಯದರ್ಶಿ ಗೀತಾ ಪೊಸನೊಟ್ಟು, ಕೋಶಾಧಿಕಾರಿ ವಸಂತ, ಜೊತೆ ಕಾರ್ಯದರ್ಶಿ ಕುಮಾರಿ ಲಿಖಿತ, ಒಕ್ಕೂಟದ ಪದಾಧಿಕಾರಿಗಳಾಗಿ ಉಷಾ ಪೊಸನೊಟ್ಟು ಹಾಗೂ ಸುಜಯ ಕುಕ್ಕುಂದೂರು, ಜಿಲ್ಲಾ ಸಮಿತಿಗೆ ಸುರೇಖಾ ಪೊಸನೊಟ್ಟು ಹಾಗೂ ಪವಿತ್ರ ಪೊಸನೊಟ್ಟು ಆಯ್ಕೆಯಾದರು. ತಾಲೂಕು ಸಮಿತಿ ಪ್ರತೀಶ ಹಾಗೂ ಲೀಲಾವತಿ ಇವರನ್ನು ಸೂಚನೆ ಅನುಮೋದನೆ ಪ್ರಕ್ರಿಯೆಯಲ್ಲಿ ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.
ಸತೀಶ್ ಪೆರ್ಡೂರು ಸ್ವಾಗತಿಸಿ ಚಂದ್ರ ಕಳ್ತೂರು ವಂದಿಸಿದರು.

LEAVE A REPLY

Please enter your comment!
Please enter your name here