ಕಾಸರಗೋಡು : ಕನ್ನಡ ಭವನದ ಸಂದ್ಯಾ ರಾಣಿ ಟೀಚರ್ ಸಾರತ್ಯದ ಕನ್ನಡ ಭವನ ಪ್ರಕಾಶನದ ಒಂಬತ್ತನೇ ಕೃತಿ “ಆದರ್ಶ ಮಹಿಳೆ ಗಾಯತ್ರಿ ನಾಗೇಶ್ “ಎಂಬ ವ್ಯಕ್ತಿ ಚಿತ್ರಣ ಕೃತಿ ಸೆಪ್ಟೆಂಬರ್ 9 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನಲ್ಲಿ ಶರವು ದೇವಸ್ಥಾನ ದ ಬಳಿಯ ಬಾಳಮ್ ಭಟ್ ಹಾಲ್ ನಲ್ಲಿ ಜರಗುವ “ಗಾಯತ್ರಿ ನಾಗೇಶ್ ಸಂಸ್ಮರಣೆ -ನುಡಿ ನಮನ -ಕೃತಿ ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಕನ್ನಡ ಭವನ ಪ್ರಕಾಶನ ಜಂಟಿಯಾಗಿ ಆಯೋಜಿಸಲಿದೆ. ಪ್ರಮುಖರು ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ. ಎಂದು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ರೇಖಾ ಸುದೇಶ್ ರಾವ್ ಹಾಗೂ ಕನ್ನಡ ಭವನ ಪ್ರಕಾಶನದ, ಪ್ರಕಾಶಕಿ ಸಂದ್ಯಾ ರಾಣಿ ಟೀಚರ್ ಜಂಟಿಯಾಗಿ ತಿಳಿಸಿದ್ದಾರೆ. ಸಂದ್ಯಾ ರಾಣಿ ಟೀಚರ್ ಕೃತಿ ರಚಿಸಿದ್ದಾರೆ.