● ರೆಸ್ಟೋರೆಂಟ್ ನ ವಾರ್ಷಿಕ ಆರ್ಡರ್ ಗಳು 4 ಪಟ್ಟು ಹೆಚ್ಚಿದ್ದು 2019ರಲ್ಲಿ 38.7ಸಾವಿರದಿಂದ 2024ರಲ್ಲಿ 1.54 ಲಕ್ಷಕ್ಕೆ ಏರಿದೆ
● ವರ್ಷದಿಂದ ವರ್ಷಕ್ಕೆ ಪ್ರಗತಿ ಶೇ.20 ಪ್ರಗತಿ ಕಾಪಾಡಿಕೊಂಡಿದೆ
● ಪರಾಠಾ ವಾಹ್, ದಿ ಮೀಲ್ ಪ್ಲೇಟ್ ಮತ್ತು ದಿ ಕಿಚಡಿ ಕ್ಲಬ್ ಮೂರು ಉಪ ಬ್ರಾಂಡ್ ಗಳ ಅಡಿಯಲ್ಲಿ ವಿಸ್ತರಣೆಯ ಯೋಜನೆ
ಬೆಂಗಳೂರು: ಸ್ಥಳೀಯವಾಗಿ ಬೆಳೆದ ಉತ್ತರ ಭಾರತದ ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ (ಕ್ಯೂ.ಎಸ್.ಆರ್.) ಬ್ರಾಂಡ್ ರೋಟಿ-ವಾಲಾ.ಕಾಂ(Roti-Wala.com) ಜೊಮ್ಯಾಟೊದಲ್ಲಿ ಸೇರ್ಪಡೆಯಾದ ನಂತರ 4X ಹೆಚ್ಚಳ ದಾಖಲಿಸಿದ್ದು ವಾರ್ಷಿಕ ಆರ್ಡರ್ ಗಳು 2019ರಲ್ಲಿ 38.7ಕೆಯಿಂದ 2024ರಲ್ಲಿ 1.54 ಲಕ್ಷಕ್ಕೆ ಏರಿಕೆಯಾಗಿದೆ. 2017ರಲ್ಲಿ ಬಿಟಿಎಂ ಲೇಔಟ್ ನಲ್ಲಿ ಸಣ್ಣ ಪ್ರಮಾಣದ ಕ್ಲೌಡ್ ಕಿಚನ್ ಆಗಿ ಸ್ಥಾಪನೆಯಾದ ಈ ಬ್ರಾಂಡ್ ಅಂದಿನಿಂದ ನಗರದಾದ್ಯಂತ ಮೂರು ಔಟ್ಲೆಟ್ ಗಳಾಗಿ ವಿಸ್ತರಿಸಿದೆ ಮತ್ತು ಈಗ ಪರಾಟಾ ವಾಹ್, ದಿ ಮೀಲ್ ಪ್ಲೇಟ್ ಮತ್ತು ದಿ ಕಿಚಡಿ ಕ್ಲಬ್ ಎಂಬ ಮೂರು ಉಪ-ಬ್ರಾಂಡ್ ಗಳೊಂದಿಗೆ ತನ್ನ ಮುಂದಿನ ಹಂತದ ಪ್ರಗತಿಗೆ ಸಜ್ಜಾಗಿದ್ದು ಅದು ದಕ್ಷತೆಯಿಂದ ವಿಸ್ತರಿಸಲು ಮತ್ತು ವಿಕಾಸಗೊಳ್ಳುತ್ತಿರುವ ಗ್ರಾಹಕರ ಅಭಿರುಚಿಗಳಿಗೆ ಪೂರೈಸುವುದನ್ನು ಮುಂದುವರಿಸುತ್ತದೆ.
ಅವರ ಪ್ರಯಾಣದ ಕುರಿತು ರೋಟಿ-ವಾಲಾ.ಕಾಂ ಸಹ-ಸಂಸ್ಥಾಪಕರಾದ ಸಲೀಂ ಮತ್ತು ನಝಿಮಾ, “ಸೀಮಿತ ಸಂಪನ್ಮೂಲಗಳೊಂದಿಗೆ ಸಣ್ಣ ಕ್ಲೌಡ್ ಕಿಚನ್ ಪ್ರಾರಂಭಿಸುವುದು ಸವಾಲಿನದಾಗಿತ್ತು, ಆದರೆ ತಾಜಾ, ಮನೆಯಲ್ಲಿ ಸಿದ್ಧಪಡಿಸಿದಂತಹ ಶೈಲಿಯ ರೋಟಿಗಳನ್ನು ಪೂರೈಸುವ ನಮ್ಮ ಆಸಕ್ತಿಯು ನಮ್ಮನ್ನು ಮುನ್ನಡೆಸುತ್ತಿದೆ. ಇಂದು ನಾವು ನಾವು ಸೇವಿಸುವಂತೆಯೇ ಪ್ರತಿನಿತ್ಯ ಸಾವಿರಾರು ಮಂದಿಗೆ ಆರೋಗ್ಯಕರ, ಮನೆಯ ಮತ್ತು ನೈರ್ಮಲ್ಯದ ಆಹಾರವನ್ನು ಪೂರೈಸಲು ಹೆಮ್ಮೆ ಪಡುತ್ತೇವೆ” ಎಂದರು.
ಎಟರ್ನಲ್ ಫುಡ್ ಡೆಲಿವರಿ ಬಿಸಿನೆಸ್ ಸಿಇಒ ಆದಿತ್ಯ ಮಂಗ್ಲಾ, “ನಮ್ಮ ಸಾಂಸ್ಕೃತಿಕ ಬೇರುಗಳಿಗೆ ಬದ್ಧವಾಗಿ ರೋಟಿ-ವಾಲಾ.ಕಾಂನಂತಹ ಬ್ರಾಂಡ್ ಗಳು ತೀವ್ರವಾಗಿ ಬೆಳೆಯುತ್ತಿರುವುದನ್ನು ನೋಡುವುದು ನಿಜಕ್ಕೂ ಸ್ಫೂರ್ತಿಯುತವಾಗಿದೆ. ನಾವು ಅವರಿಗೆ ಉತ್ತಮ ರೀತಿಯಲ್ಲಿ ಗ್ರಾಹಕರ ಸೇವೆ ಒದಗಿಸಲು ಸಾಧನಗಳು ಮತ್ತು ಕ್ರೋಢೀಕರಿಸಿದ ಒಳನೋಟಗಳನ್ನು ನೀಡಿ ಅವರ ಪ್ರಯಾಣದಲ್ಲಿ ಬೆಂಬಲಿಸಲು ನಾವು ಬಹಳ ಸಂತೋಷ ಹೊಂದಿದ್ದೇವೆ. ನಮ್ಮ ಪ್ಲಾಟ್ ಫಾರಂನಲ್ಲಿ ರೆಸ್ಟೋರೆಂಟ್ ಗಳು ಬೆಳೆಯಲು ನೆರವಾಗುವುದು ನಮಗೆ ಪ್ರಮುಖ ಆದ್ಯತೆಯಾಗಿದೆ” ಎಂದರು.
ರೋಟಿ-ವಾಲಾ.ಕಾಂ ಮನೆಯಿಂದ ಹೊರಗಿರುವವರಿಗೆ ತಾಜಾ, ಮನೆಯಲ್ಲಿನಂತಹ ರೋಟಿಗಳನ್ನು ಪೂರೈಸುವ ಸರಳ ಆದರೆ ಶಕ್ತಿಯುತ ಐಡಿಯಾ ಮೇಲೆ ಸ್ಥಾಪನೆಯಾಯಿತು. ಕಾಲ ಕಳೆದಂತೆ ಈ ಬ್ರಾಂಡ್ ತನ್ನ ಕೊಡುಗೆಗಳನ್ನು ರೋಟಿಗಳಿಗಿಂತ ಆಚೆಗೂ ವಿಸ್ತರಿಸಿದ್ದು 100ಕ್ಕೂ ಹೆಚ್ಚು ತಿನಿಸುಗಳಿಗಿಂತ ಹೆಚ್ಚು ಉತ್ತರ ಭಾರತದ ಮೆನುವನ್ನು ಹೊಂದಿದೆ. ಕುಟುಂಬಗಳು, ವಿದ್ಯಾರ್ಥಿಗಳು, ವೃತ್ತಿಪರರು, ಕಾರ್ಪೊರೇಟ್ ಗಳು ಮತ್ತು ಆಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಿರುವ ರೋಟಿ-ವಾಲಾ.ಕಾಂ ನೈರ್ಮಲ್ಯ, ಕೈಗೆಟುಕಬಲ್ಲತೆ ಮತ್ತು ಗುಣಮಟ್ಟಕ್ಕೆ ಸತತವಾಗಿ ಆದ್ಯತೆ ನೀಡಿ ನಿಷ್ಠಾವಂತ ಗ್ರಾಹಕರನ್ನು ರೂಪಿಸಿದ್ದು ಬೆಂಗಳೂರಿನ ಸ್ಪರ್ಧಾತ್ಮಕ ಆಹಾರ ಕ್ಷೇತ್ರದಲ್ಲಿ ವಿಸ್ತಾರ ಮಾನ್ಯತೆ ಪಡೆದಿದೆ.
ಜೊಮ್ಯಾಟೊ ಸೇರ್ಪಡೆಯಾದ ದಿನದಿಂದಲೂ ಈ ಬ್ರಾಂಡ್:
● ವಾರ್ಷಿಕ ಆರ್ಡರ್ ಗಳು 2019ರಿಂದ 38.7 ಸಾವಿರದಿಂದ 4 ಪಟ್ಟು ಹೆಚ್ಚಳ ಕಂಡಿದ್ದು 2024ರಲ್ಲಿ 1.54 ಲಕ್ಷಕ್ಕೆ ಏರಿವೆ
● ಶೇ.20ರಷ್ಟು ವರ್ಷದಿಂದ ವರ್ಷದ ಪ್ರಗತಿ ಕಾಪಾಡಿಕೊಂಡಿದ್ದು ಸದೃಢ ಮಾರುಕಟ್ಟೆ ಬೇಡಿಕೆ ಬಿಂಬಿಸಿದೆ
● ಮೆನುವಿನ ನೈರ್ಮಲ್ಯ ಸುಧಾರಿಸಿದೆ ಮತ್ತು ಗ್ರಾಹಕ ಅನುಭವ ಸುಧಾರಣೆಯ ಫೀಡ್ ಬ್ಯಾಕ್ ದೊರೆತಿದೆ
● ಜಾಹೀರಾತು ಸಾಧನೆಯು ಹೆಚ್ಚಿನ ಆರ್ಡರ್ ಪ್ರಮಾಣಗಳು ಮತ್ತು ಗ್ರಾಹಕರ ಸಕ್ರಿಯತೆಯನ್ನು ಮುನ್ನಡೆಸುವ ಮೌಲ್ಯಯುತ ಒಳನೋಟಗಳನ್ನು ಪಡೆದಿದೆ.
ಸಣ್ಣ ರೆಸ್ಟೋರೆಂಟ್ ಗಳಿಗೆ ವೇಗವಾಗಿ ವಿಸ್ತರಿಸಲು ಜೊಮ್ಯಾಟೊ ಇತ್ತೀಚಿನ ವರ್ಷಗಳಲ್ಲಿ ಹಲವಾರು ಉಪಕ್ರಮಗಳನ್ನು ಪರಿಚಯಿಸಿದೆ. ಇದರಲ್ಲಿ ಡಿಐವೈ ಆನ್ ಬೋರ್ಡಿಂಗ್ ಸಾಧನವು ರೆಸ್ಟೋರೆಂಟ್ ಗಳಿಗೆ ಕೇವಲ 15 ನಿಮಿಷಗಳಲ್ಲಿ ಪ್ಲಾಟ್ ಫಾರಂನಲ್ಲಿ ಪಟ್ಟಿಯಾಗಲು ನೆರವಾಗುತ್ತದೆ ಮತ್ತು ಲೈಸನ್ಸಿಂಗ್, ಸ್ಡಾಫಿಂಗ್ ಮತ್ತು ಹೈಜಿನ್ ಆಡಿಟ್ ಸೇವೆಗಳನ್ನು ಒದಗಿಸುವ ಪರಿಶೀಲಿಸಲಾದ ಕ್ಯುರೇಟೆಡ್ ಮಾರ್ಕೆಟ್ ಪ್ಲೇಸ್ ರೆಸ್ಟೋರೆಂಟ್ ಸರ್ವೀಸಸ್ ಹಬ್ ಲಭ್ಯತೆ ನೀಡುತ್ತದೆ. ಆಯ್ದ ನಗರಗಳಲ್ಲಿ ಹೊಸ ರೆಸ್ಟೋರೆಂಟ್ ಗಳು ಮೊದಲ 30 ದಿನಗಳಿಗೆ 0% ಕಮಿಷನ್ ನಿಂದ ಅನುಕೂಲ ಪಡೆಯಬಹುದು, ಇದರೊಂದಿಗೆ ಜಾಹೀರಾತುಗಳಿಗೆ ಕ್ರೆಡಿಟ್ ಗಳು ಮತ್ತು ಹೈಪರ್ ಪ್ಯೂರ್ ಸೇವೆಗಳನ್ನು ಪಡೆಯಬಹುದು. 2026ರ 1ನೇ ತ್ರೈಮಾಸಿಕದಲ್ಲಿ ಜೊಮ್ಯಾಟೊ ಸರಾಸರಿ 313,000 ಮಾಸಿಕ ಸಕ್ರಿಯ ಫುಡ್ ಆರ್ಡರಿಂಗ್ ಮತ್ತು ಡೆಲಿವರಿ ರೆಸ್ಟೋರೆಂಟ್ ಪಾಲುದಾರರನ್ನು ಪ್ಲಾಟ್ ಫಾರಂನಲ್ಲಿ ಹೊಂದಿದೆ.