ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಮಹಾಸಭೆ-12% ಡಿವಿಡೆಂಡ್ ಘೋಷಣೆ

0
66

ಉಡುಪಿ: ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಉಡುಪಿ-ಇದರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ: 03-09-2025ನೇ ಬುಧವಾರದಂದು ಮಿನಿಹಾಲ್ ಪುರಭವನ(ಟೌನ್ ಹಾಲ್) ಅಜ್ಜರಕಾಡು, ಉಡುಪಿ ಅª್ಯ ಸಂಘದ ಅಧ್ಯಕ್ಷ ಶ್ರೀ ಕೆ. ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘದ ನಿರ್ದೇಶಕರಾದ ಶ್ರೀಶ ಕೊಡವೂರು ಸ್ವಾಗತಿಸಿದರು. ಸಂಘದ ಅಧ್ಯಕ್ಷ ಕೆ. ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು . ಮಹಾಸಭೆಯಲ್ಲಿ ಸಂಘದ ಸದಸ್ಯರಿಗೆ 12% ಡಿವಿಡೆಂಡ್ ಘೋಷಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ರಮೇಶ್ ಶೆಟ್ಟಿ ಕಾರ್ಕಳ ಹಾಗೂ ನಿರ್ದೇಶಕರಾದ ಸುರೇಶ್ ಪ್ರಭು, ರಮೇಶ್ ಶೆಟ್ಟಿ ಜಾರ್ಕಳ, ಸ್ನೇಹಪ್ರಭಾ ಕಮಲಾಕ್ಷ , ಶ್ರೀಶ ಕೊಡವೂರು, ಶಿವಪ್ರಸಾದ್ ಶೆಟ್ಟಿ, ಶ್ರೀ ಗಣೇಶ್ ಕುಮಾರ್, ರಾಧಿಕಾ ಕಾಮತ್, ಅವಿನಾಶ್ ಬಿ.ಎಸ್ ಹಾಗೂ ಸಂಘದ ಸಲಹೆಗಾರರಾದ .ಫ್ರೊ.ಕೆ.ಕಮಲಾಕ್ಷ ಉಪಸ್ಥಿತರಿದ್ದರು. ಸಂಘದ ಮುಖ್ಯ ಕರ‍್ಯನರ‍್ವಾಹಕಿ ರಂಜಿತಾ ಪ್ರವೀಣ್‌ರವರು 2024-25ರ ಆಡಳಿತ ವರದಿಯನ್ನು ಮಂಡಿಸಿದರು. ನಿರ್ದೇಶಕರಾದ ಶಿವಪ್ರಸಾದ್ ಶೆಟ್ಟಿ ಅವರ ಧನ್ಯವಾದದೊಂದಿಗೆ ಸಭೆಯು ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here