ಯಶಸ್ವಿಯಾದ ಶ್ರೀ ಗಾಯತ್ರಿ ಪೂಜೆ, ಉಪಾಸನೆ

0
53

ದಾವಣಗೆರೆಯ ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ 25 ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ಅನಂತನ ಹುಣ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ಕೀರ್ತಿಶೇಷ ಎಂ. ವೀರಭದ್ರರಾವ್ ಕುಟುಂಬದ ವತಿಯಿಂದ ನಡೆದ ಈ ಧಾರ್ಮಿಕ ಸೇವೆ ಪೂಜೆ ಸುಸಂಪನ್ನ ಗೊಂಡಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ ಶೆಣೈ ತಿಳಿಸಿದ್ದಾರೆ.
ಈ ಸಾಮೂಹಿಕ ಪೂಜೆಯಲ್ಲಿ ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ಡಾ. ರಮೇಶ್ ಪಟೇಲ್, ಖಜಾಂಚಿ ಪುರುಷೋತ್ತಮ ಪಟೇಲ್, ಪೂಜೆಯ ಸೇವಾಕರ್ತರಾದ ಎಂ.ಶ್ರೀನಿವಾಸ್, ಸಂಚಾಲಕರದ ಭಾವನ್ನಾರಾಯಣ, ಆರ್.ಎಂ.ಸತೀಶ್, ಪರಿವಾರದ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ವಿ.ಕೃಷ್ಣಮೂರ್ತಿ, ಬಿ.ಸತ್ಯನಾರಾಯಣ ಮೂರ್ತಿ, ಶ್ರೀಮತಿ ಶೈಲಜಾ ಶಿವಯೋಗಿ, ಎಂ.ಎಸ್.ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here