ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶ್ರೀ ನಾರಾಯಣ ಗುರುಗಳ ೧೭೧ನೇ ಜನ್ಮ ಜಯಂತಿ ಪ್ರಯುಕ್ತ ಮೂಲ್ಕಿ ವ್ಯಾಪ್ತಿಯ ನಾರಾಯಣ ಗುರುಗಳ ಭಕ್ತರು ಪ್ರತಿ ವರ್ಷ ಯಾವುದಾದರೂ ಒಂದು ಮನೆಯಿಂದ ವಿವಿಧ ಬಿರುದಾವಳಿಗಳಿಂದ ನಾರಾಯಣಗುರುಗಳ ಶೋಭಾಯಾತ್ರೆಯನ್ನು ಮೂಲ್ಕಿಯ ಪೇಟೆಗಳಲ್ಲಿ ತಂದು ಜನರಿಗೆ ಮನೋರಂಜನೆಯನ್ನು ಕೊಡುತ್ತಾ ಬಂದಿದ್ದರು.

ಈ ವರ್ಷ ಶ್ರೀಗುರು ಭಾವಚಿತ್ರವನ್ನು ಮೂಲ್ಕಿ ಕಾರ್ನಾಡಿನಿಂದ ಗ್ರಾಮಸ್ಥರ ಕೂಡುವಿಕೆಯಲ್ಲಿ ಶ್ರೀಮತಿ ಶ್ಯಾಮಲ ಮತ್ತು ವಾಸು ಕೋಟ್ಯಾನ್‌ರವರ ಮನೆ ನಂದನದಲ್ಲಿ ಶ್ರೀಗುರು ಪೂಜೆಯ ಬಳಿಕ ವಿವಿಧ ವಾದ್ಯಗೋಷ್ಠಿಗಳು, ಭಜನಾ ಸಂಕೀರ್ತನೆಗಳು ಹಾಗೂ ಭಜನಾ ನೃತ್ಯ ತಂಡದೊAದಿಗೆ ಶೋಭಾಯಾತ್ರೆಯೂ ಹರಿಹರಕ್ಷೇತ್ರ, ಕಾರ್ನಾಡು, ಮೂಲ್ಕಿ ಬಸ್‌ನಿಲ್ದಾಣ, ಬಪ್ಪನಾಡು ದೇವಸ್ಥಾನ, ಪಂಚಮಹಲ್ ರಸ್ತೆಯ ಮೂಲಕ ಸಂಘವನ್ನು ತಲುಪಿ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಮೂಲಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.