ಸೆ.14 ರಂದು ರಾಜ್ಯ ಮಟ್ಟದ ಉಚಿತ ಕವಿಗೋಷ್ಠಿ ಉದ್ಘಾಟನೆ

0
61

ದಾವಣಗೆರೆಯ ಶ್ರೀ ವಿರಕ್ತಮಠ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ದಾವಣಗೆರೆ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 14 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ದೊಡ್ಡಪೇಟೆಯ ಶ್ರೀ ವಿರಕ್ತಮಠದ ಸಭಾಂಗಣದಲ್ಲಿ ಶ್ರೀ ಬಸವಣ್ಣನ ಕುರಿತಂತೆ ರಾಜ್ಯ ಮಟ್ಟದ ಉಚಿತ ಕವಿಗೋಷ್ಠಿ ಉದ್ಘಾಟನೆ ನಡೆಯಲಿದೆ ಎಂದು ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ತಿಳಿಸಿದ್ದಾರೆ.
ಸಮಾರಂಭದ ದಿವ್ಯ ಸಾನಿದ್ಯ ಹಾಗೂ ಅಧ್ಯಕ್ಷತೆಯನ್ನು ಶ್ರೀ ವಿರಕ್ತಮಠದ ಗುರುಗಳಾದ ಡಾ. ಶ್ರೀ ಬಸವಪ್ರಭು ಸ್ವಾಮೀಜಿಯವರು ವಹಿಸಿಕೊಳ್ಳಲಿದ್ದಾರೆ. ಉದ್ಘಾಟನೆಯನ್ನು ದಾವಣಗೆರೆಯ ಹಿರಿಯ ಸಾಹಿತಿ ಸೌಹಾರ್ದ ಪ್ರಕಾಶನದ ಸಂಸ್ಥಾಪಕದರಾದ ಶ್ರೀಮತಿ ಎ.ಸಿ.ಶಶಿಕಲಾ ಶಂಕರಮೂರ್ತಿಯವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಕುಸುಮಾ ಲೋಕೇಶ್, ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ದಾವಣಗೆರೆಯ ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರು ಕವಯತ್ರಿ ಶ್ರೀಮತಿ ಲಲಿತಾ ಕಲ್ಲೇಶ್ ಹಾಗೂ ಸಮಾಜದ ಸೇವಕರು, ದಾನಿಗಳಾದ ಶ್ರೀ ಬಸವೇಶ್ವರ ಟ್ರಸ್ಟ್ನ ಮಹಾಂತೇಶ್ ಒಣರೊಟ್ಟಿ ಆಗಮಿಸಲಿದ್ದಾರೆ.
ಕರ್ನಾಟಕ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರ ಅಭಿಮಾನಿಗಳು, ಸಾಹಿತಿಗಳು, ಕವಿ, ಕವಯತ್ರಿಯವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಅಪರೂಪದ ಉಚಿತ ರಾಜ್ಯ ಮಟ್ಟದ ಶ್ರೀ ಬಸವಣ್ಣನವರ ಕುರಿತು ಕವಿಗೋಷ್ಠಿಯನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ವಿರಕ್ತಮಠ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ದಾವಣಗೆರೆ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಸರ್ವ ಸದಸ್ಯರು ಪದಾಧಿಕಾರಿಗಳು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here