ತುಳುವ ಮಹಾಸಭೆಯ ಬಸ್ರೂರು ಸಂಚಾಲಕರ ಸಭೆ ಯಶಸ್ವಿ

0
76

ವರದಿ- ರಾಜೇಶ್ ಭಟ್ ತುಳುನಾಡು ವಾರ್ತೆ

ತುಳುನಾಡು: ತುಳುವ ಮಹಾಸಭೆ ಜಿಲ್ಲಾ ಮಟ್ಟದ ಮುಖ್ಯಸ್ಥರು ಜೊತೆಗೆ ಕುಂದಾಪುರ ಮತ್ತು ಬೈಂದೂರು ತಾಲೂಕು ಸಂಚಾಲಕರ ಸಭೆ ಮತ್ತು ತುಳುವೇಶ್ವರ ದೇವಸ್ಥಾನದ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಪೂರ್ವ ತಯಾರಿ ಸಭೆ ದಿನಾಂಕ 7 ಸಪ್ಟೆಂಬರ್ 2025, ಆದಿತ್ಯವಾರ ಬೆಳಗ್ಗೆ 10.00 ಗಂಟೆಗೆ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ಬಸ್ರೂರು ಇಲ್ಲಿ ನಡೆಯಿತು.
ಅಕ್ಟೋಬರ್ 6 ರಿಂದ 11 ರವರೆಗೆ ನಡೆಯುವ ತುಳುವೇಶ್ವರ ದೇವಸ್ಥಾನದ ಪುನಃ ಚೇತನದ ಬಗ್ಗೆ ಜ್ಯೋತಿಷ್ಯ ತಿಲಕಂ ಶಶಿಧರ ಮಾಂಗಾಡ್ ನೇತೃತ್ವದಲ್ಲಿ ಅಷ್ಟಮಂಗಳ ಪ್ರಶ್ನೆ ಚಿಂತನೆ ನಡೆಯಲಿದೆ.
ಆ ಪ್ರಯುಕ್ತ ಪೂರ್ವ ತಯಾರಿ ಸಭೆಯು ಮೇಲಿನ ದಿನಾಂಕ ಮತ್ತು ಸ್ಥಳದಲ್ಲಿ ನಡೆಯಿತು . ತುಳುವ ಮಹಾಸಭೆಯ ಎಲ್ಲಾ ಸಂಚಾಲಕರು ಮತ್ತು ತುಳುವೇಶ್ವರ ದೇವರ ಸುಮಾರು 200 ಭಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.


ಇದೇ ಸಂದರ್ಭದಲ್ಲಿ ಅಷ್ಟಮಂಗಲ ಪ್ರಶ್ನೆಯ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಬೇಕಾದ ಸಮಿತಿಯನ್ನು ರಚಿಸಲಾಯಿತು ಹಾಗೂ ಮುಂದಿನ ದಿನಗಳಲ್ಲಿ ಯಾವ ರೀತಿ ಸಾರ್ವಜನಿಕರು ಮತ್ತು ಭಕ್ತರು ಶ್ರೀ ಕ್ಷೇತ್ರದ ಬಗ್ಗೆ ತೊಡಗಿಸಿಕೊಳ್ಳುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಸಭೆಯ ಅಧ್ಯಕ್ಷತೆ ಬಸ್ರೂರು ಪಂಚಾಯತ್ ಅಧ್ಯಕ್ಷರಾದಂತಹ ದಿನಕರ್ ಶೆಟ್ಟಿ , ಆಗಮಿಸಿದ್ದರು ಮುಖ್ಯ ಅತಿಥಿಗಳಾಗಿ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಧರ್ಮದರ್ಶಿಯಾದ ಅಪ್ಪಣೆ ಹೆಗ್ಡೆ ಯವರ ಮಗ ರಾಮಕೃಷ್ಣ ಹೆಗ್ಡೆ, ಬಾಲಕೃಷ್ಣ ಶೆಟ್ಟಿ,ರಾಜೇಶ್ ಆಳ್ವ, ಪ್ರಮೋದ್ ಸಪ್ರೆ, ದಿನಕರ್ ಶೆಟ್ಟಿ, ರಾಘವೇಂದ್ರ ಶೆಟ್ಟಿ,ಆಶಾ ಎ ಹೆಗ್ಡೆ, ಜಯಂತಿ ಎಸ್ ಬಂಗೇರ, ಅರವಿಂದ ಬೆಲ್ಚಡ, ಅವಿನ್ ಆಳ್ವ, ಸಹಿತ ಊರ ಪರವೂರ ಗಣ್ಯರು ಮಹನೀಯರು ಭಕ್ತಾದಿಗಳು ಉಪಸ್ಥಿತರಿದ್ದರು.
ಪ್ರಮೋದ್ ಸಪ್ರೇಯವರ ಪ್ರಾರ್ಥನೆ ಗೀತೆಯೊಂದಿಗೆ ಆರಂಭವಾದ ಸಭೆಯ ಸ್ವಾಗತವನ್ನು ಆಶಾ ಎ ಹೆಗ್ಡೆ ಮಾಡಿದರು. ಸಭೆಯ ಪ್ರಾಸ್ತಾವಿಕ ಮಾತುಗಳನ್ನು ತುಳುವ ಮಹಾಸಭೆಯ ಕಾರ್ಯಾಧ್ಯಕ್ಷ ರಾಜೇಶ ಆಳ್ವ ನೆರವೇರಿಸಿದರು ರಾಘವೇಂದ್ರ ಶೆಟ್ಟಿ ಧನ್ಯವಾದಗಳು ಸಮರ್ಪಿಸಿದರು.

LEAVE A REPLY

Please enter your comment!
Please enter your name here