ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಗುರುವಾಯನಕೆರೆ ತಾಲೂಕು ತಣ್ಣೀರುಪಂತ ವಲಯ
ದ.ಕ.ಜಿ.ಪ ಸರಕಾರಿ ಪ್ರೌಢಶಾಲೆ ಪುತ್ತಿಲದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಉದ್ಘಾಟನೆಯನ್ನು ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜಯರಾಜ್ ಹೆಗ್ಡೆ ಪುತ್ತಿಲರವರು ನೆರವೇರಿಸಿ, ಮಕ್ಕಳಿಗೆ ಶುಭಹಾರೈಸಿದರು,
ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿ.ಸೋಮಶೇಖರ್ ಶೆಟ್ಟಿಯವರು ದುಶ್ಚಟದಿಂದ ಮಕ್ಕಳು ದೂರ ಇರಬೇಕು.ತಂದೆ ತಾಯಿಗೆ ಉತ್ತಮ ಮಕ್ಕಳಾಗಿ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ಬೆಳೆಯಬೇಕು ಮದ್ಯಪಾನ, ಸಿಗರೇಟ್, ಗಾಂಜಾ, ಆಫೀಮ್ ಇವುಗಳಿಂದ ದೂರವಿದ್ದು,ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಮೂಡಿ ಬರಬೇಕು ಎಂದು ತಿಳಿಸಿದ್ರು,
ಈ ಸಂಧರ್ಭದಲ್ಲಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷರಾದ ರಾಜಶೇಖರ ರೈ, ಶಾಲೆಯ ಮುಖ್ಯೋಪಾಧ್ಯಾಯರಾದ ಮಹೇಂದ್ರ ಪೂಜಾರಿ, ಪುತ್ತಿಲ ಒಕ್ಕೂಟದ ಕಾರ್ಯದರ್ಶಿಯಾದ ಸುಖಲತಾರವರು ಸೇವಾಪ್ರತಿನಿಧಿಯಾದ ಸುನೀತಾ ಹಾಗೂ ಶಾಲೆಯ ಶಿಕ್ಷಕ ವೃಂದಾದವರು ಮತ್ತು ಮಕ್ಕಳು ಉಪಸ್ಥಿತರಿದ್ದರು
ಕಾರ್ಯಕ್ರಮದ ನಿರೂಪಣೆಯನ್ನು ವಲಯದ ಮೇಲ್ವಿಚಾರಕರಾದ ವಿಶ್ವನಾಥ ಪೂಜಾರಿ, ಸ್ವಾಗತವನ್ನು ಸೇವಾಪ್ರತಿನಿಧಿಯಾದ ಶಾಂತರವರು ಶಿಕ್ಷಕರಾದ ಪ್ರದೀಪ್ ರವರು ಧನ್ಯವಾದವಿತ್ತರು.

