ಲಯನ್ಸ್ ಇಂಟರ್ ನ್ಯಾಷನಲ್ ಕ್ಲಬ್ ಆಫ್ ಸೋಮೇಶ್ವರ ಮಂಗಳೂರು ವತಿಯಿಂದ “ಹಂಗರ್ ರಿಲೀಫ್” ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ರೋಗಿಗಳು ಹಾಗೂ ಬಡ ಕುಟುಂಬಗಳಿಗೆ ಆಹಾರ ಕಿಟ್ ಮತ್ತು ಬೆಡ್ ಶೀಟ್ ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮವು ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ಸಭಾಭವನದಲ್ಲಿ ನಡೆಯಿತು. ಕ್ಲಬ್ ಉಪಾಧ್ಯಕ್ಷ ಲಯನ್ ಕಮಾಂಡರ್ ವಿಜಯ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಕ್ಲಬ್ ಅಧ್ಯಕ್ಷ ಲಯನ್ ವಿಜಯನ್ ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಲಯನ್ ರಾಘವನ್ ಮೂತಾಳ್ ಹಾಗೂ ಲಯನ್ ಚಂದ್ರಶೇಖರ ಹೆನಾಲ್, ಲಯನ್ ಶಶಿಕುಮಾರ್ ನಾಯರ್ ಮಾತನಾಡಿದರು. ಕ್ಲಬ್ ಪಿಆರ್‌ಓ ಲಯನ್ ಡಾ. ಅನುರೂಪ ಸ್ವಾಗತ ಕೋರಿದರು.
ಲಯನ್ ಫ್ಲಾವಿಯಾ ಡಿಸೋಜ ಧನ್ಯವಾದಗಳನ್ನು ಸಲ್ಲಿಸಿದರು.