ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ.; ಶೇ. 15 ಡಿವಿಡೆಂಡ್ ಘೋಷಣೆ

0
104

ಉಡುಪಿ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸೆ. 9ರಂದು ಸಂಘದ ಅಧ್ಯಕ್ಷರಾದ ಅರುಣ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಜರಗಿತು.
ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ಹೆಗ್ಡೆ ಸಂಘದ 97ನೇ ವರ್ಷದ ವಾರ್ಷಿಕ ವರದಿ, ವರದಿಗೆ ತಯಾರಿಸಿದ ಅನುಪಾಲನಾ ವರದಿ, ಆಯ-ವ್ಯಯ ಪಟ್ಟಿ ಹಾಗೂ ೨೦೨೫-೨೬ನೇ ಸಾಲಿನ ಯೋಜಿತ ಕಾರ್ಯಕ್ರಮಗಳನ್ನು ಮಂಡಿಸಿದರು. ಹಾಗೂ ೨೦೨೫-೨೬ ನೇ ಸಾಲಿನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರ ನೇಮಕಾತಿ ಬಗ್ಗೆ ಮಹಾಸಭೆಯಲ್ಲಿ ಮಂಡನೆ ಮಾಡಿ ಅನುಮೋದಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಪಾಲು ಬಂಡವಾಳದ ಮೇಲೆ ಶೇಕಡಾ ೧೫ ರಷ್ಟು ಡಿವಿಡೆಂಡ್ ಘೋಷಿಸಿರುತ್ತದೆ. ೨೦೨೫ ರ ಮಾರ್ಚ್ ಅಂತ್ಯಕ್ಕೆ ೧೯೩ ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದ್ದು ರೂ. ೧೮೧ ಕೋಟಿ ಸದಸ್ಯರಿಗೆ ಸಾಲ ವಿತರಿಸಿದೆ. ವಸೂಲಾತಿಯಲ್ಲಿಯೂ ದಾಖಲೆ ಹೊಂದಿದ್ದು, ೮೯೧ ಕೋಟಿ ರೂಪಾಯಿಗೂ ಮೀರಿ ವಾರ್ಷಿಕ ವ್ಯವಹಾರ ಮಾಡಿರುತ್ತದೆ ಎಂದು ಸಭೆಗೆ ತಿಳಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿ ದ್ವಿತೀಯ ಬಾರಿಗೆ ಆಯ್ಕೆಯಾದ ಶ್ರೀ ರವಿರಾಜ್ ಹೆಗ್ಡೆ ಇವರನ್ನು ಸನ್ಮಾನಿಸಲಾಯಿತು. ನಮ್ಮ ಸಂಘದ ೧೦ ಜನ ಹಿರಿಯ ಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಾರ್ಟರ್ಡ್ ಅಕೌಂಟೆAಟ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾದ ನಮ್ಮ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಅಭಿವಂದನೆ ಸಲ್ಲಿಸಲಾಯಿತು. ಶಾಖಾ ವ್ಯಾಪ್ತಿಯಲ್ಲಿ ಬರುವ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ಸದಸ್ಯರ ೯ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರತಿಭಾ ಪುರಸ್ಕಾರ ಮಾಡಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಸಂಘದ ಮುದ್ರಣ ಘಟಕ ನಿಟ್ಟೂರಿನಲ್ಲಿ ಎಲ್ಲಾ ತರಹದ ಸಹಕಾರ ಸಂಘ, ಸೌಹಾರ್ದ ಸೊಸೈಟಿ ಹಾಗೂ ಸಹಕಾರಿ ಬ್ಯಾಂಕ್‌ಗಳಿಗೆ ಬೇಕಾಗುವ ಎಲ್ಲಾ ತರಹದ ಪುಸ್ತಕ, ಫಾರ್ಮುಗಳು ಇತ್ಯಾದಿ ಮುದ್ರಣ ಕೆಲಸವನ್ನು ಕ್ಲಪ್ತ ಸಮಯದಲ್ಲಿ ಹಾಗೂ ರಿಯಾಯಿತಿ ದರದಲ್ಲಿ ಮುದ್ರಿಸಿ ಕೊಡುವ ಬಗ್ಗೆ ತಿಳಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಎಮ್. ಗಣೇಶ್ ಕಿಣಿ, ನಿರ್ದೇಶಕರಾದ ಇಂದು ರಮಾನಂದ ಭಟ್, ನಾರಾಯಣ ಬಲ್ಲಾಳ್, ಎಲ್. ಉಮಾನಾಥ, ದೇವದಾಸ್ ಶೆಟ್ಟಿಗಾರ್, ಯಶವಂತ ನಾಯಕ್, ರಾಧಾಕೃಷ್ಣ ಶೆಣೈ, ಮೀನಾ ಕುಮಾರಿ ಯು. , ಶ್ವೇತಾ ಜೆ. ಶೆಟ್ಟಿ, ಅಬ್ದುಲ್ಲಾ ಎಚ್. ಸಾಹೇಬ್ , ಅರುಣ್ ಟಿ. ಶೆಟ್ಟಿ, ಸುರೇಶ್ ನಾಯ್ಕ್, ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರು ಹಾಗೂ ಸಹಕಾರ ಮಹಾ ಮಂಡಳ-ಬೆಂಗಳೂರು ಇದರ ನಿರ್ದೇಶಕರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು ಉಪಸ್ಥಿತರಿದ್ದು, ಸಂಘದ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಸಂಘದ ಉಪಾಧ್ಯಕ್ಷರಾದ ಎಮ್. ಗಣೇಶ್ ಕಿಣಿಯವರು ಧನ್ಯವಾದ ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here