ಬೆಂಗಳೂರಿನಲ್ಲಿ ‘ವೈಚಾರಿಕ ಆಕ್ರಮಣ: ಭಾರತದ ಆಂತರಿಕ ಶತ್ರು!’; ವಿಶೇಷ ಸಂವಾದ ಸಂಪನ್ನ

0
184

ರಾಷ್ಟ್ರನಿಷ್ಠ ವಕೀಲರು, ಉದ್ಯಮಿಗಳು, ಸೇರಿದಂತೆ 350 ಕ್ಕೂ ಅಧಿಕ ಮಂದಿ ಸಹಭಾಗಿತ್ವ

“ಹಿಂದೂ ಜೀವನಶೈಲಿ ಎಲ್ಲವನ್ನೂ ರಕ್ಷಿಸುವ ಚಿಂತನೆಯಾಗಿದೆ. ಆದರೆ ಇಂದಿನ ಕಾಲದಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆ ತರುವ ಚಿಂತನೆಗಳನ್ನು ಪೋಷಿಸಲಾಗುತ್ತಿದೆ. ಇತರ ಪಂಥಗಳಿಗೆ ಧಾರ್ಮಿಕ ಸ್ವಾತಂತ್ರ್ಯವಿರುವಂತೆ ತೋರಿಸಲಾಗುತ್ತಿದೆಯಾದರೂ, ಸನಾತನ ಧರ್ಮದ ನಾಶಕ್ಕೆ ಕಾನೂನಿನ ಸಹಕಾರವಿದೆಯೇ ಎಂಬ ಪ್ರಶ್ನೆ ಎದ್ದಿದೆ. ಹಿಂದೂ ಧರ್ಮವು ಮತವಲ್ಲ. ಮತಗಳು ಸಂಕುಚಿತ ಪರಿಕಲ್ಪನೆಯಾಗಿವೆ; ಕೆಲ ಪಂಥಗಳಲ್ಲಿ ಬದಲಾವಣೆಗೇ ಅವಕಾಶವಿಲ್ಲ. ಆದರೆ ಭಾರತದ ಚಿಂತನೆ ಈ ಸಂಕುಚಿತ ಪರಿಕಲ್ಪನೆಗಳಿಗೆ ವಿರುದ್ಧ. ಹಿಂದೂ ಧರ್ಮವು ಎಲ್ಲವನ್ನೂ ಅಳವಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಅದಕ್ಕಾಗಿ ಇದನ್ನು ವಿಶಾಲ ಆಲದ ಮರವೆಂದು ಕರೆಯಬಹುದು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ. ಪಿ. ಕೃಷ್ಣ ಭಟ್ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಆಡಿಟೋರಿಯಂ, ಬಸವನಗುಡಿಯಲ್ಲಿ ಆಯೋಜಿಸಲಾಗಿದ್ದ ವೈಚಾರಿಕ ಆಕ್ರಮಣ : ಭಾರತದ ಆಂತರಿಕ ಶತ್ರು ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಸಂವಾದ ಟಿವಿಯ ಸಂಪಾದಕರಾದ ಶ್ರೀ. ವೃಷಾಂಕ ಭಟ್, ವಿಶ್ವ ಹಿಂದೂ ಪರಿಷತ್ ನ ದಕ್ಷಿಣ ಪ್ರಾಂತ್ಯ ಅಧ್ಯಕ್ಷರಾದ ಶ್ರೀ. ದೀಪಕ್ ರಾಜಗೋಪಾಲ್, ಶ್ರೀ. ಸಂದೀಪ್ ಬಾಲಕೃಷ್ಣ ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರು, ದಿ ಧರ್ಮ ಡಿಸ್ಪ್ಯಾಚ್, ಸ್ಟ್ರಿಂಗ್ ರಿವಿಲ್ಸ್ ನ ಶ್ರೀ. ವಿನೋದ್, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಸೇರಿದಂತೆ 350ಕ್ಕೂ ಅಧಿಕ ರಾಷ್ಟ್ರ- ಧರ್ಮ ಪ್ರಮಿ ಹಿಂದೂಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಯುಟ್ಯೂಬ್ ಮತ್ತು ಫೇಸ್ಬುಕ್ ಮುಖಾಂತರ ನೇರ ಪ್ರಸಾರ ಮಾಡಲಾಯಿತು, 5000ಕ್ಕೂ ಹೆಚ್ಚು ಜನರು ನೇರ ಪ್ರಸಾರವನ್ನು ವೀಕ್ಷಿಸಿದರು.

LEAVE A REPLY

Please enter your comment!
Please enter your name here