ರೋಟರಿ ಕ್ಲಬ್, ನಿಟ್ಟೆ ಇದರಿಂದ ಪ್ರವರ್ತಿಸಲ್ಪಟ್ಟ ರೋಟರಿ ಸಮುದಾಯ ದಳ, ಕೆಮ್ಮಣ್ಣು, ನಿಟ್ಟೆ ಇದರ 2025-26ನೇ (37ನೇ ವರ್ಷದ) ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಣ್ಣು, ನಿಟ್ಟೆ ಇಲ್ಲಿ ನಡೆಯಿತು.
ಪದಪ್ರಧಾನ ಅಧಿಕಾರಿಗಳಾಗಿ ಮಾತೃ ಸಂಸ್ಥೆ ರೋಟರಿ ಕ್ಲಬ್, ನಿಟ್ಟೆ ಇದರ ಅಧ್ಯಕ್ಷರಾದ ರೊI ಡಾ. ರಘುನಂದನ್ ಕೆ.ಆರ್ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಲಯ – 5 ರ ಸಹಾಯಕ ಗವರ್ನರ್ ರೊI ವಿಘ್ನೇಶ್ ಶೆಣೈ, 2025-26ರ RCC Chairman PHF ರೊI ಅಲೆನ್ ಲೂವಿಸ್, RCC ಸಭಾಪತಿ ರೊI ಡಾ. ದಿಲೀಪ್ ಕುಮಾರ್, ಮಾಜಿ RCC ಜಿಲ್ಲಾ ಪ್ರತಿನಿಧಿ ವೆಂಕಟಕೃಷ್ಣ ಕುಮಾರ್, ಮಾಜಿ RCC ಸಭಾಪತಿ ರೊI ಕೆ. ಅನಿಲ್ ಕುಮಾರ್ ಉಪಸ್ಥಿತರಿದ್ದರು. 2024-25ನೇ ಸಾಲಿನ ಅಧ್ಯಕ್ಷ ರಾಜೇಶ್ ಕುಲಾಲ್ ಸ್ವಾಗತಿಸಿದರು. ಪ್ರಶಾಂತ್ ಕುಮಾರ್ ಹೊಳ್ಳ, ಶಂಕರ್ ಪೂಜಾರಿ ಹಾಗೂ ಪ್ರದೀಪ್ ಸುವರ್ಣ ಅತಿಥಿ ಪರಿಚಯ ಗೈದರು. ಕಾರ್ಯದರ್ಶಿ ಉಮೇಶ್ ಕೋಟ್ಯಾನ್ ವರದಿ ವಾಚಿಸಿದರು. ನೂತನ ಅಧ್ಯಕ್ಷ ಗಣೇಶ್ ಭಟ್ ತಮ್ಮ ಕಾರ್ಯಯೋಜನೆಗಳಿಗೆ ಸರ್ವರ ಸಹಕಾರ ಯಾಚಿಸಿದರು. ಇದೇ ಸಂದರ್ಭದಲ್ಲಿ 7ನೇ ತರಗತಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಧೀರಜ್ ಮತ್ತು ಪೂರ್ವಿರವರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಪೂರ್ವಾಧ್ಯಕ್ಷರುಗಳನ್ನು ಗೌರವಿಸಲಾಯಿತು. ಪೂರ್ವಾಧ್ಯಕ್ಷ ವಿಠಲ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

