ಮಂಗಳೂರು : ತುಳುನಾಡಿನ ಅವಳಿ ವೀರರಾದ ಕಾನದ ಕಟದರ ಸಾಹಸ ಕಥನವನ್ನು ಬಿಂಬಿಸುವ ‘ಕಾರ್ನಿಕದ ಕಾನದ ಕಟದೆರ್ ‘ಯಕ್ಷಗಾನ ಪ್ರದರ್ಶನ ಸೆ.14 ರಂದು ಮಧ್ಯಾಹ್ನ 2:00 ಗಂಟೆಗೆ ಮಂಗಳೂರಿನ ಉರ್ವ ಸ್ಟೋರಿನ ತುಳು ಭವನದ ಸಿರಿಚಾವಡಿಯಲ್ಲಿ ನಡೆಯಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ಸತ್ಯ ಸಾರಮನಿ ಯಕ್ಷಗಾನ ಕಲಾ ಮಂಡಳಿ ಮಿಜಾರ್ ಇವರು ಯಕ್ಷಗಾನ ಪ್ರಸಂಗವನ್ನು ಪ್ರಸ್ತುತ ಪಡಿಸುವರು. ಸಂಜೆ ಆರು ಗಂಟೆ ತನಕ ಯಕ್ಷಗಾನ ನಡೆಯಲಿದೆ .
ಪರಿಶಿಷ್ಟ ಜಾತಿ ಸಮುದಾಯದಲ್ಲಿ ಹುಟ್ಟಿ ಬೆಳೆದು ಬಂದ ಕಾನದ – ಕಟದರು ತುಳುನಾಡಿನಲ್ಲಿ ಅವಳಿ ವೀರರಾದ ಕೋಟಿ ಚೆನ್ನಯರು ತೋರಿದಂತಹ ಸಾಹಸ ಹಾಗೂ ಕಾರ್ನಿಕದ ಮಹಿಮೆಗಳನ್ನು ತೋರಿಸಿ ಅಮರ ವೀರರು ಎಂದು ಜನಾನುರಾಗಿಗಳಾದವರು ಎಂಬ ಪ್ರತೀತಿ ಇದೆ. ಕಾನದ ಕಟದರ ಹುಟ್ಟು, ಪ್ರಸರಣದ ಚಿತ್ರಣವನ್ನು ಈ ಯಕ್ಷಗಾನ ಪ್ರಸಂಗವು ಪ್ರಸ್ತುತಪಡಿಸಲಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.