ಆಲೂರು: ರಾಧಮ್ಮ ಜನ ಸ್ಪಂದನ ಟ್ರಸ್ಟ್ ವತಿಯಿಂದ ನಡೆದ ಹೆಚ್.ಪಿ.ವಿ ಲಸಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಕಾರ್ಯದರ್ಶಿಯಾದ ಮಲ್ನಾಡ್ ಶಾಡೋ ಹಾಗೂ ಮಾಧ್ಯಮ ಬಿಂಬ ಪತ್ರಿಕಾ ಬಳಗ, ಸ್ವಯಂ ಟೈಮ್ಸ್ ನ್ಯೂಸ್ ಚಾನೆಲ್ ಸಂಸ್ಥಾಪಕರಾದ ವಸಂತ್ ಕುಮಾರ್ ರನ್ನು ಸನ್ಮಾನ ಮಾಡಲಾಯಿತು.
ರಾಧಮ್ಮ ಜನ ಸ್ಪಂದನೆ ಟ್ರಸ್ಟ್ ನ ಹೇಮಂತ್ ಕುಮಾರ್, ಮಲೆನಾಡು ನರ್ಸಿಂಗ್ ಹೋಮ್ ನ ವೈದ್ಯರಾದ ಡಾ.ಸಾವಿತ್ರಿ, ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕಿರಣ, ಡಾ. ನಿಸಾರ್ ಫಾತಿಮಾ, ಕಲ್ವೀರ ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ, ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ಪ್ರಕಾಶ್, ಎಂ ಪಿ. ಹರೀಶ್, ಇನ್ ಸ್ಪೇರ್ ಶಿಕ್ಷಣ ಸಂಸ್ಥೆಯ ಅಶೋಕ್, ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷರು ಹಾಗೂ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು ಹಾಗೂ ಉದಯವಾಣಿ ಪತ್ರಿಕಾ ವರದಿಗಾರ ನವೀನ್ ಬೈರಾ ಪುರ ಮತ್ತಿತರರು ಉಪಸ್ಥಿತರಿದ್ದರು.