ಸ್ಪೂರ್ತಿ ವಿಶೇಷ ಶಾಲೆಯಲ್ಲಿ ನವೀಕೃತ ಫಿಸಿಯೋಥೆರಪಿ ಕೊಠಡಿ ಉದ್ಘಾಟನೆ

0
47


ಮೂಡುಬಿದಿರೆ: ವಿದ್ಯಾವರ್ಧಕ ಸಂಘ ಬೆಳುವಾಯಿ, ರಿಜುವನೇಟ್ ಚೈಲ್ಡ್ ಫೌಂಡೇಶನ್ ಮೂಡುಬಿದಿರೆ ಇದರ ಪ್ರಾಯೋಜಕತ್ವದ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವೀಕೃತಗೊಳಿಸಲಾದ ಫಿಸಿಯೋಥೆರಪಿ ಕೊಠಡಿ ಉದ್ಘಾಟನೆ ಕಾರ್ಯಕ್ರಮ ಶುಕ್ರವಾರ ಆಯೋಜಿಸಲಾಯಿತು.
ಗುಡ್ ಫಾರ್ ಗುಡ್‌ಟ್ರಸ್ಟ್ ಅಧ್ಯಕ್ಷ ಅಕ್ಷಯ್ ಸುವರ್ಣ ಅಧ್ಯಕ್ಷತೆವಹಿಸಿ ಮಾತನಾಡಿ, ವಿಶೇಷ ಮಕ್ಕಳ ಜೊತೆ ನಮ್ಮ ಟ್ರಸ್ಟ್ನ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ತೃಪ್ತಿ ನೀಡಿದೆ. ಇಲ್ಲಿನ ವ್ಯವಸ್ಥೆ, ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ ಪ್ರತಿಯೊಂದು ಸಂಸ್ಥೆಗೂ ಪ್ರೇರಣೆ ನೀಡುವಂತದ್ದು. ಸ್ಪೂರ್ತಿ, ನಮ್ಮ ಟ್ರಸ್ಟ್ ಅಥವಾ ಸಮಾಜಮುಖಿ ದೃಷ್ಠಿಕೋನವನ್ನು ಹೊಂದಿರುವ ಯಾವುದೇ ಸಂಸ್ಥೆಯ ಉದ್ದೇಶ ವ್ಯಕ್ತಿ ನಿರ್ಮಾಣ, ಆ ಮುಖೇನ ರಾಷ್ಟç ನಿರ್ಮಾಣವಾಗಿರುತ್ತದೆ ಎಂದರು.
ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಶಿಕ್ಷಕರನ್ನು ಗೌರವಿಸಲಾಯಿತು.
ಟ್ರಸ್ಟ್ನ ಉಪಾಧ್ಯಕ್ಷ ಸತ್ಯರಾಜ್ ಶೆಟ್ಟಿಗಾರ್, ಜೊತೆ ಕಾರ್ಯದರ್ಶಿ ಸಚಿತ್ ಕುಲಾಲ್, ಲಯನ್ಸ್ ಕ್ಲಬ್ ಅಲಂಗಾರು ಅಧ್ಯಕ್ಷ ಅಮಿತ್ ಡಿಸಿಲ್ವ, ವಿದ್ಯಾವರ್ಧಕ ಸಂಘದ ಟ್ರಸ್ಟಿಗಳಾದ ಸದಾಶಿವ ಶೆಟ್ಟಿ, ಯುವರಾಜ್ ಜೈನ್, ಆಳ್ವಾಸ್ ಹೆಲ್ತ್ ಸೆಂಟರ್ ಹೋಮಿಯೋಪತಿ ವಿಭಾಗದ ಡಾ.ಅಸ್ಮಾ, ಸ್ಪೂರ್ತಿ ಪೋಷಕರಸಮಿತಿಯ ಅಧ್ಯಕ್ಷೆ ಲತಾ ಸುರೇಶ್, ಮುಖ್ಯ ಶಿಕ್ಷಕಿ ಶರ್ಮಿಳಾ ವಾಸ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಅನಿತಾ ರೊಡ್ರಿಗಸ್ ಉಪಸ್ಥಿತರಿದ್ದರು.
ಪ್ರವೀಣ್ ಜೈನ್ ನಿರೂಪಿಸಿದರು.

LEAVE A REPLY

Please enter your comment!
Please enter your name here