ಮಂಗಳೂರು: ಧಾರ್ಮಿಕ ಹಬ್ಬಗಳ ಸಂಪ್ರದಾಯವನ್ನು ಭಕ್ತಿಶೃದ್ಧೆಯಿಂದ ಒಗ್ಗಟ್ಟಾಗಿ ಆಚರಿಸುವುದರಿಂದ ಸರ್ವರಿಗೂ ಶ್ರೇಯಸ್ಸು ಎಂದು ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ (ರಿ.)ನ ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ಟ್ರಸ್ಟ್ ಮಹಿಳಾ ವಿಭಾಗದ ವತಿಯಿಂದ ಸೆ. ೨೩ರಂದು ಕುಡ್ಲ ಪೆವಿಲಿಯನ್‌ನಲ್ಲಿ ನಡೆಯಲಿರುವ ನವರಾತ್ರಿದುರ್ಗಾ ಪೂಜೆ ಪ್ರಯುಕ್ತ ಕುಡ್ಲ ವೆಜ್ ಹೋಟೆಲ್‌ನಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ.) ಇದರ ಸ್ಥಾಪಕ ಅಧ್ಯಕ್ಷ ಡಾ|| ಅತ್ತೂರು ಸದಾನಂದ ಶೆಟ್ಟಿ ನವರಾತ್ರಿ ದುರ್ಗಾ ಪೂಜೆಯನ್ನು ಉದ್ಘಾಟಿಸುವರು. ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಮತ್ತು ವಿವಿಧ ಬಂಟರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿರುವರು.
ಧಾರ್ಮಿಕ ಕಾರ್ಯಕ್ರಮಗಳು:- ಸಂಜೆ ೪.೦೦ ರಿಂದ ೮.೦೦ ರತನಕ ಕಾವೂರು ಬಂಟರ ಸಂಘದ ಮಹಿಳಾ ವಿಭಾಗದಿಂದ ಭಜನೆ, ಕುಂಕುಮಾರ್ಚನೆ. ಲಲಿತ ಸಹಸ್ರನಾಮ, ಮಂಗಳ ಪೂಜೆ, ಪ್ರಸಾದ ವಿತರಣೆ,ದಾಂಡಿಯಾ ನೃತ್ಯ ಮತ್ತು ಸಹಭೋಜನದೊಂದಿಗೆಮುಕ್ತಾಯಗೊಳ್ಳಲಿದೆ.
ಪೂರ್ವಭಾವಿ ಸಭೆಯಲ್ಲಿ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ (ರಿ.)ನ ಕಾರ್ಯಾಧ್ಯಕ್ಷ ದೇವಿಚರಣ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರಾಜ್‌ಗೋಪಾಲ್ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಆರತಿ ಆಳ್ವ ಮತ್ತು ಟ್ರಸ್ಟ್ ಪ್ರಮುಖರು ಉಪಸ್ಥಿತರಿದ್ದರು ಎಂದು ಟ್ರಸ್ಟ್ ಮಾಧ್ಯಮ ಪ್ರತಿನಿಧಿ ಮುಲ್ಕಿ ಕರುಣಾಕರ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.