ಮೂಡುಬಿದಿರೆ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕಡಂದಲೆ-ಪಾಲಡ್ಕ ಆಶ್ರಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಗೆ 7ನೇ ವರ್ಷದ ‘ನಮ್ಮ ನಡಿಗೆ ಅಮ್ಮನೆಡೆಗೆ’ ಪಾದಯಾತ್ರೆ ಸೆ.14ರಂದು ಬೆಳಗ್ಗೆ 5 ಗಂಟೆಯಿಂದ ನಡೆಯಲಿದೆ.
ವಸ್ತ್ರ ಸಂಹಿತೆ : ಯಾತ್ರಾರ್ಥಿಗಳ ಉಡುಗೆ ಧಾರ್ಮಿಕತೆಯನ್ನು ಪ್ರತಿಬಿಂಬಿಸುವಂತಿರಲಿ. ಸಂಘದಿಂದ ಹೊರಟು ಪಾಲಡ್ಕ ಗುಂಡ್ಯಡ್ಕ, ಕಲ್ಲಮುಂಡ್ಕೂರು, ನಿಡ್ಡೋಡಿ ಮಾರ್ಗವಾಗಿ ಶ್ರೀಕ್ಷೇತ್ರ ಕಟೀಲಿಗೆ ಸಾಗುವುದು. ಪಾದಯಾತ್ರೆಯಲ್ಲಿ ಭಾಗವಹಿಸಲು ಇಚ್ಚಿಸುವ ಎಲ್ಲಾ ಭಕ್ತಾಧಿಗಳಿಗೆ ಮುಕ್ತ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ನಿತಿನ್ ಅಮೀನ್- 9632565226, ಸೀತಾರಾಮ ಸಾಲ್ಯಾನ್- 72597 69281 ಹಾಗೂ ಶಿವರಾಮ್-96638 61418 ಎಂದು ಸಂಘಟಕರು ತಿಳಿಸಿದ್ದಾರೆ.