ನಾಡಹಬ್ಬ ದಸರಾ ಹತ್ತಿರವಾಗುತ್ತಿದೆ. ದಸರಾ ಅಂದ ತಕ್ಷಣ ನಮಗೆ ವಿಶ್ವ ಪ್ರಸಿದ್ಧ ಮೈಸೂರು ದಸರಾ ನೆನಪಾಗುತ್ತದೆ. ಹಾಗೆ ದಸರಾ ಬಂಬೂಸವಾರಿ ಎಲ್ಲರ ಕಣ್ಣ ಮುಂದೆ ಬರುತ್ತೆ. ಇನ್ನು ಮಕ್ಕಳಿಗೆ ದಸರಾ ಎಂದ ತಕ್ಷಣ ರಜೆಗಳು ನೆನಪಾಗುತ್ತವೆ. ಬೇಸಿಗೆ ರಜೆ ಹೊರತುಪಡಿಸಿದರೆ ದಸರಾ ರಜೆ ಹೆಚ್ಛಾಗಿ ನೀಡುವುದು ನೋಡಬಹುದು. ಅದ್ರಲ್ಲೂ ಸರ್ಕಾರಿ ಶಾಲಾ ಮಕ್ಕಳಿಗೆ 20 ದಿನಗಳ ಕಾಲ ದಸರಾ ರಜೆ ಸಿಗಲಿದೆ.
ಈ ಕುರಿತಾಗಿ ರಾಜ್ಯ ಶಿಕ್ಷಣ ಇಲಾಖೆ ಶೈಕ್ಷಣಿಕ ವೇಳಾಪಟ್ಟಿಯಲ್ಲಿಯೇ ಈ ರಜೆಗಳ ಕುರಿತಾಗಿ ಮಾಹಿತಿ ನೀಡಿರಲಿದೆ. ಅದ್ರಲ್ಲೂ ನಾಡಹಬ್ಬಗಳು, ಸಾರ್ವತ್ರಿಕ ರಜೆಗಳು, ಸ್ಥಳೀಯ ರಜೆಗಳ ಮಾಹಿತಿ ಕೂಡ ನೀಡಲಾಗಿರುತ್ತದೆ. ಅದರಂತೆ ಈ ವರ್ಷದ ದಸರಾ ರಜೆಯು ಸೆಪ್ಟೆಂಬರ್ 20ರಿಂದ ಆರಂಭವಾಗುತ್ತಿದೆ. ಈ ನಡುವೆ ಕೆಲವು ಸ್ಥಳೀಯ ರಜೆಗಳು ಕೂಡ ಇರಲಿದೆ. ಈ ರಜೆಯ ನಡುವೆಯೂ ಒಂದು ದಿನ ಶಾಲೆ ತೆರೆದಿರಲಿದೆ. ಹಾಗಾದ್ರೆ ದಸರಾ ರಜೆ ಯಾವಾಗ ಆರಂಭ? ಯಾವ ದಿನ ಶಾಲೆ ತೆರೆಯಲಿದೆ ಎಂಬ ಮಾಹಿತಿ ಇಲ್ಲಿದೆ.
ಮಳೆಗಾಲದಲ್ಲೂ ಅತೀ ಹೆಚ್ಚು ರಜೆ ರಾಜ್ಯದಲ್ಲಿ ಈ ಬಾರಿ ಅತ್ಯಧಿಕ ಮಳೆಯಾಗಿದೆ. ಹಾಗೆ ಮಳೆಯ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ಅತ್ಯಧಿಕ ರಜೆ ನೀಡಲಾಗಿದೆ. ಕೆಲವು ಕಡೆ ಬರೋಬ್ಬರಿ 10ಕ್ಕೂ ಹೆಚ್ಚು ದಿನ ಮಳೆ ಕಾರಣದಿಂದ ರಜೆ ನೀಡಲಾಗಿದೆ. ಹೀಗಾಗಿ ಶೈಕ್ಷಣಿಕ ವರ್ಷದಲ್ಲಿ ತರಗತಿಗಳು ಕೂಡ ಕಡಿಮೆಯಾಗಿವೆ. ಇನ್ನು ಈ ವರ್ಷದ ದಸರಾ ರಜೆ ಸೆಪ್ಟೆಂಬರ್ 10ರಿಂದ ಅಕ್ಟೋಬರ್ 7ರ ವರೆಗೆ ನೀಡಲಾಗಿದೆ. ಬರೋಬ್ಬರಿ 18 ದಿನಗಳ ಕಾಲ ರಜೆ ನೀಡಲಾಗಿದೆ. ಹಾಗೆ ಈ ರಜೆಯ ನಡುವೆಯೂ ಒಂದು ದಿನ ಶಾಲೆಗೆ ತೆರೆಯಲಿದೆ. ಅಕ್ಟೋಬರ್ 2ರಂದು ಶಾಲೆ ರೀಓಪನ್ ದಸರಾ ರಜೆ ಇದ್ದರೂ ಅಕ್ಟೋಬರ್ 2ರಂದು ಶಾಲೆ ತೆರೆಯಲು ಸೂಚಿಸಲಾಗಿದೆ. ಈ ದಿನ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಇರುವ ಕಾರಣ ಕಡ್ಡಾಯವಾಗಿ ಮಕ್ಕಳು ಶಾಲೆಗೆ ಹಾಜರಾಗುಂತೆ ಹಾಗೆ ಶಿಕ್ಷಕರು ಶಾಲೆಯಲ್ಲಿ ಈ ದಿನ ಆಚರಿಸುವಂತೆ ಸೂಚಿಸಲಾಗಿದೆ.
ಅಕ್ಟೋಬರ್‌ನಲ್ಲಿಯೇ ದೀಪಾವಳಿ ರಜೆ ಅಕ್ಟೋಬರ್‌ನಲ್ಲಿ ಸಾಲು ಸಾಲು ರಜೆಗಳಿವೆ, ಅದ್ರಲ್ಲೂ ವಾಲ್ಮೀಕಿ ಜಯಂತಿ 7ರಂದು ರಜೆ ಇದೆ. ಇದಾದ ಬಳಿಕ ದೀಪಾವಳಿ ಸಂದರ್ಭದಲ್ಲಿ ಅಕ್ಟೋಬರ್ 20 ನರಕ ಚತುರ್ದಶಿ, ಅಕ್ಟೋಬರ್ 22 ಕ್ಕೆ ಬಲಿಪಾಡ್ಯಗೆ ಸಾರ್ವಜನಿಕ ರಜೆ ಇದೆ. ಅಕ್ಟೋಬರ್‌ನಲ್ಲಿ ಸತತ ರಜೆಗಳಿವೆ. ಹಬ್ಬಗಳು ಮುಗಿಯುತ್ತಿದ್ದಂತೆ ಶಾಲೆಗಳು ಆರಂಭವಾಗಲಿದೆ. ಹಾಗೆ ಪರೀಕ್ಷೆ ಸಂಬಂಧಿತ ತಯಾರಿಗಳು ನಡೆಯಲಿವೆ. ಅಕ್ಟೋಬರ್‌ನಲ್ಲಿ 10 ದಿನ ಬ್ಯಾಂಕ್ ರಜೆ ಹಬ್ಬಗಳ ಕಾರಣದಿಂದಾಗಿ ರಾಜ್ಯವೂ ಸೇರಿ ಹಲವು ಕಡೆಗಳಲ್ಲಿ ಒಟ್ಟಾರೆಯಾಗಿ 10 ದಿನ ಬ್ಯಾಂಕ್ ರಜೆ ಇರಲಿದೆ. ಈ ತಿಂಗಳಲ್ಲಿ ನಿಮ್ಮ ಬ್ಯಾಂಕಿಂಗ್ ಕುರಿತಾದ ವ್ಯವಹಾರವನ್ನು ದಿನಾಂಕಗಳ ನೋಡಿಕೊಂಡು ಪೂರ್ವ ತಯಾರಿಯೊಂದಿಗೆ ಮುಗಿಸುವುದು ಉತ್ತಮ.
ಅಕ್ಟೋಬರ್ 1 ಬುಧವಾರ -ದಸರಾ/ ಆಯುಧ ಪೂಜೆ ಅಕ್ಟೋಬರ್ 2 ಗುರುವಾರ – ಗಾಂಧಿ ಜಯಂತಿ ಅಕ್ಟೋಬರ್ 5 – ಭಾನುವಾರ ಅಕ್ಟೋಬರ್ 11 – 2 ನೇ ಶನಿವಾರ ಅಕ್ಟೋಬರ್ 12 – ಭಾನುವಾರ ಅಕ್ಟೋಬರ್ 19 – ಭಾನುವಾರ ಅಕ್ಟೋಬರ್ 20 ಸೋಮವಾರ- ನರಕ ಚತುರ್ದಶಿ ಅಕ್ಟೋಬರ್ 22 ಬುಧವಾರ – ಬಲಿಪಾಡ್ಯಮಿ ದೀಪಾವಳಿ ಅಕ್ಟೋಬರ್ 25 – 4 ನೇ ಶನಿವಾರ ಅಕ್ಟೋಬರ್ 26 – ಭಾನುವಾರ