ತುಳುನಾಡು : ತುಳುವ ಮಹಾಸಭೆ ಮುಲ್ಕಿ ತಾಲೂಕು ಘಟಕದ ವತಿಯಿಂದ “ತುಳುನಾಡ ಗೀತೆ ಗಾಯನ “ವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ. “ಜಯ ಜಯ ಜಯ ತುಳುವ ಸೀಮೆ ಅಪ್ಪೆನಾಡುಗು” (ಡಿ. ಮೋನಪ್ಪ ತಿಂಗಲಾಯರ ಬರೆದ) ತುಳುನಾಡ ಗೀತೆಗೆ 125 ವರ್ಷ ಪೂರ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ತುಳುನಾಡ ಗೀತೆಯನ್ನು ಸಮೂಹ ಗಾಯನವಾಗಿ ರಾಗ ತಾಳ ಲಯ ಬದ್ಧವಾಗಿ ಹಾಡುವ ರೀತಿಯನ್ನು ಈ ಸಂದರ್ಭದಲ್ಲಿ ಹೇಳಿಕೊಡಲಾಗುವುದು ಬಹುಭಾಷಾ ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು ಈ ಗಾಯಕೋತ್ಸವವು 2025ರ ಸೆಪ್ಟೆಂಬರ್ 14ರಂದು, ಭಾನುವಾರ, ಬೆಳಿಗ್ಗೆ 10 ಗಂಟೆಗೆ ಶ್ರೀ ಕಟೀಲ್ ದುಗಾಪರಮೇಶ್ವರಿ ದೇವಸ್ಥಾನದ ಡಿ.ಜಿ. ಕಾಲೇಜ್ ಆವರಣದಲ್ಲಿ ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ಮುಲ್ಕಿ ತಾಲೂಕು ತುಳುವ ಮಹಾಸಭೆಯ ಸಂಚಾಲಕ ಸಮಾವೇಶವೂ ನಡೆಯಲಿದೆ.
ಮಾತೃಭಾಷಾ ಪ್ರೇಮಿ, ತುಳುವ ಮಹಾಸಭೆ ಮುಲ್ಕಿ ಪ್ರಧಾನ ಸಂಚಾಲಕಿ ಶ್ರೀಮತಿ ಭಾನುಮತಿ ಶೆಟ್ಟೆ ಕಟ್ಕಗುಟ್ಟು ಹಾಗೂ ಮಹಾಸಭೆಯ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ಸು ಗಳಿಸಬೇಕಾಗಿ ತುಳುವ ಮಹಾಸಬೆ, ಕೇಂದ್ರ ಕಚೇರಿ ಕಟೀಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವರದಿ: ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ