ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮಾದರಿ ಒಕ್ಕೂಟದ ದೂರದೃಷ್ಟಿ ವ್ಯಾಪಾರ ಅಭಿವೃದ್ಧಿಯ ವಾರ್ಷಿಕ ಕ್ರಿಯಾ ಯೋಜನೆಯ ತರಬೇತಿ ಮುಕ್ತಾಯಗೊಂಡಿತು. ಸಮರೋಪ ಸಮಾರಂಭದಲ್ಲಿ ಮಾದಕ ವಸ್ತು ವ್ಯಸನದ ಬಗ್ಗೆ ಜನಜಾಗೃತಿ ಪ್ರತಿಜ್ಞೆ ವಿಧಿ ಹಾಗೂ ಒಕ್ಕೂಟದ ಸದಸ್ಯರು ಕಿರು ನಾಟಕ ದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರದರ್ಶನ ನೀಡಿದರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಪನ್ಮೂಲ ವ್ಯಕ್ತಿ ಮೌನೇಶ್ ವಿಶ್ವಕರ್ಮ ಮಾದಕ ವಸ್ತು ವ್ಯಸನದ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷರಾದ ಜಯಲಕ್ಷ್ಮಿ ಅವರು ಧನ್ಯವಾದ ತಿಳಿಸಿದರು.