ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕಿನ ಮಾಣಿ ವಲಯದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜನರಿಗೆ ಜೀವನ ಶೈಲಿಯ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ನಡೆಸಲಾಯಿತು.
ಸಂಸ್ಕಾರ ಜೋಡು ಮಾರ್ಗ ಕಲಾವಿದರಿಂದ ಮಾನಸಿಕ ರೋಗ, ಮೊಬೈಲ್ ಬಳಕೆ, ತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ಅಪಾಯ, ಅರೋಗ್ಯ ವಿಷಯಗಳ ಬಗ್ಗೆ ರೂಪಕ ನಡೆಸಿಕೊಟ್ಟರು. ಕಾರ್ಯಕ್ರಮದ ಉದ್ಘಾಟನೆ ಶೇರ ಒಕ್ಕೂಟ ಅಧ್ಯಕ್ಷರಾದ ಭುವನೇಶ್ವರಿ ನೆರವೇರಿಸಿದರು, ಕಾರ್ಯಕ್ರಮದಲ್ಲಿ ಒಕ್ಕೂಟ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು. ಸ್ವಾಗತ ಜ್ಞಾನವಿಕಾಸ ಸಮನ್ವಯಧಿಕಾರಿ, ವಲಯ ಮೇಲ್ವಿಚಾರಕಿ ಆಶಾಪಾರ್ವತಿ ಧನ್ಯವಾದ ನೀಡಿದರು.