ಪಠ್ಯದಲ್ಲಿ ದೇಶದ ನಾಡು, ನುಡಿ, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರ ಸಾಧನೆಗಳು ಪಡಿಮೂಡಲಿ-ಶಾಸಕ ಉಮಾನಾಥ ಕೋಟ್ಯಾನ್

0
142

ಡ್ರಗ್ಸ್ ಇತ್ಯಾದಿ ಚಟಗಳಿಂದ ಮುಕ್ತರಾದ ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಒಪ್ಪಿಸುವ ಜವಾಬ್ದಾರಿ ಹೊತ್ತಿರುವ ನೀವು ಸಂಸ್ಕಾರ ಕಲಿಸಿ ಕ್ರೀಡಾ, ಸಾಂಸ್ಕೃತಿಕ ಪ್ರತಿಭೆಗಳನ್ನು ಬೆಳೆಸಬೇಕು ಎಂದು ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ದಕ್ಷಿಣ ಕನ್ನಡ ಜಿಲ್ಲಾ ಪ.ಪೂ.ಕಾಲೇಜುಗಳ ಪ್ರಾಚಾರ್ಯರ ಸಂಘ, ದ.ಕ.ಪ.ಪೂ.ಕಾ.ನೌಕರರ ಸಂಘ, ಉಪನ್ಯಾಸಕರ ಸಂಘ, ದೈಹಿಕ ಶಿ.ಸಂಘ ಹಾಗೂ ಎಕ್ಸಲೆಂಟ್ ಪ.ಪೂ.ಕಾಲೇಜು, ಕಲ್ಲಬೆಟ್ಟು, ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 14ರಂದು ರಂದು ಎಕ್ಸಲೆಂಟ್ ರಾಜ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡರೊಂದಿಗೆ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು.
ಕಲಿತವರು ಹೊರದೇಶಕ್ಕೆ ಓಡುತ್ತಿರುವ ಈ ಸಂದರ್ಭದಲ್ಲಿ ಹೆತ್ತವರು ದಿಕ್ಕಾಪಾಲಾಗುತ್ತಿದ್ದಾರೆ. ಅವರ ಗೋಳು ಕೇಳುವವರೇ ಇಲ್ಲದಂತಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯದಲ್ಲಿ ಬರುವಂತಹ ದೇಶದ ಸ್ವಾತಂತ್ರ್ಯಕ್ಕಾಗಿ, ನಾಡು, ನುಡಿ ನೆಲಕ್ಕಾಗಿ ಬಲಿದಾನ ಮಾಡಿದವರ ನೆನಪು ಮಾಡಿಕೊಂಡು ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸಬೇಕು. ದೇಶದ ಸಂಸ್ಕೃತಿ, ಸಂಸ್ಕಾರವನ್ನು ಪ್ರತೀ ದಿನ ತಿಳಿಸಿ ಕೊಡಿ ಎಂದು ಕೇಳಿಕೊಂಡರು.
ವೇದಿಕೆಯಲ್ಲಿ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ, ಅಂತರ್ ರಾಷ್ಟ್ರೀಯ ಕೇಶ ವಿನ್ಯಾಸಗಾರ ಶಿವರಾಮ ಕೃಷ್ಣ ಭಂಡಾರಿ, ಪ.ಪೂ.ಕಾ.ನೌಕರರ ಸಂಘದ ಅಧ್ಯಕ್ಷ ಡಾ ಹರೀಶ್, ಶಾ.ಶಿ.ಇಲಾಖೆಯ ಉಪನಿರ್ದೇಶಕಿ ರಾಜೇಶ್ವರಿ ಹೆಚ್ , ಎಕ್ಸಲೆಂಟ್ ಕಾರ್ಯದರ್ಶಿ ರಶ್ಮಿತಾ ಜೈನ್, ಆನಂದ ಪಿ, ನಿತಿನ್ , ಅಧ್ಯಕ್ಷರುಗಳಾದ ಜಯಾನಂದ ಸುವರ್ಣ, ಸೋಮಶೇಖರ ನಾಯಕ, ಎಕ್ಸಲೆಂಟ್ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಹಾಜರಿದ್ದರು. ಉಪನ್ಯಾಸಕರು ಉಮೇಶ್ ಹಾಗೂ ದಿನಕರ್ ಕಾರ್ಯಕ್ರಮ ನಿರ್ವಹಿಸಿದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here