ಶ್ರೀ ಬಪ್ಪನಾಡು ಸೌಹಾರ್ದ ಸಹಕಾರಿ ಸಂಘ (ನಿ.); ವಾರ್ಷಿಕ ಮಹಾಸಭೆಯಲ್ಲಿ ಹರಿಶ್ಚಂದ್ರ ಪಿ. ಸಾಲಿಯಾನ್‌ರವರಿಗೆ ಸನ್ಮಾನ

0
148

ಸೌಹಾರ್ದ ಸಹಕಾರಿ ಸಂಘದ ಅಭಿವೃದ್ದಿಗೆ ಸಂಘದ ಸದಸ್ಯರು ಹಾಗೂ ಊರಿನ ನಮ್ಮ ಮಿತ್ರರು ಬಹಳಷ್ಟು ಸಹಾಯ ಸಹಕಾರವನ್ನು ಕೊಟ್ಟು ಸಂಘದ ವ್ಯವಹಾರವು ಒಳ್ಳೆಯ ರೀತಿಯಿಂದ ನಡೆಯುವಂತೆ ೧೫ ವರ್ಷಗಳಿಂದ ನಮ್ಮೊಟ್ಟಿಗೆ ಇದ್ದು ೧೫ ವರ್ಷದ ಈ ಮಹಾಸಭೆಯಲ್ಲಿ ನಮ್ಮ ಸಂಘಕ್ಕೆ ಬೇಕಾಗುವ ನಿವೇಶನ ಹಾಗೂ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡುವಂತಹ ಯೋಜನೆಯೂ ನಮ್ಮಲ್ಲಿದೆ. ಇದಕ್ಕೆ ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್‌ರವರು ಹೇಳಿದರು.
ಈ ಮಹಾಸಭೆಯಲ್ಲಿ ಸಂಘದ ಸ್ಥಾಪಕ ಸದಸ್ಯರು ಹಾಗೂ ಇತರ ರಂಗದಲ್ಲಿ ಸಾಧನೆ ಮಾಡಿದ ಮೂವರಿಗೆ ಸನ್ಮಾನ ಮಾಡಲಾಯಿತು. ಇದರಲ್ಲಿ ಮೂಲ್ಕಿಯ ಸಾಹಿತಿ ಸಮಾಜ ಸೇವಕ ಜ್ಯೋತಿಷರಾದ ಹರಿಶ್ಚಂದ್ರ ಪಿ ಸಾಲಿಯಾನ್‌ರವರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಹರಿಶ್ಚಂದ್ರ ಪಿ ಸಾಲಿಯಾನ್‌ರವರು ಮಾತನಾಡಿ, ೧೫ ವರ್ಷದ ಮೊದಲು ಈ ಸಂಘ ಸ್ಥಾಪನೆಯಾಗುವಾಗ ಬಹಳಷ್ಟು ಜನ ಸದಸ್ಯರಾಗಿ ಸಂಘಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಈ ದಿನ ಇ-ಸ್ಟಾಂಪ್ ಸೌಲಭ್ಯವನ್ನು ಸಂಘದ ವತಿಯಿಂದ ಆರಂಭ ಮಾಡಿರುವುದರಿಂದ ಜನರಿಗೆ ಪ್ರಯೋಜನವಾಗಿದೆ. ಸಂಘವು ನಿರಂತರ ಪ್ರಗತಿಯನ್ನು ಕಂಡು ಸಂಘಕ್ಕೆ ಸ್ವಂತ ಕಟ್ಟಡವನ್ನು ಅದಷ್ಟು ಬೇಗ ಮಾಡಲು ನಾವೆಲ್ಲರೂ ಪ್ರೋತ್ಸಾಹಿಸಬೇಕೆಂದು ಹೇಳಿದರು. ಇವರೊಂದಿಗೆ ನಿವೃತ ಗ್ರಂಥಪಾಲಕ ಮೋಹನ್ ರಾವ್ ಮತ್ತು ಯೋಗಪಟು ಜಯಮುದ್ದು ಶೆಟ್ಟಿ ಇವರಿಗೆ ಸನ್ಮಾನ ಮಾಡಲಾಯಿತು. ಸಂಘದ ಉಪಾಧ್ಯಕ್ಷರಾದ ಶ್ಯಾಮ್ ಪ್ರಸಾದ್ ನಿರ್ದೇಶಕರಾದ ಶ್ರೀಮತಿ ಕಸ್ತೂರಿ ಪಂಜ, ಸಂಪತ್ ಕಾರ್ನಾಡ್, ಜಯಾನಂದ ರಾವ್, ಶೈಲೇಶ್ ಕುಮಾರ್, ರಮಾನಾಥ ಪೈ, ಅರುಣ್ ಭಂಡಾರಿ, ಶ್ರೀಮತಿ ಶಕುಂತಲಾ ಬಂಗೇರ ಉಪಸ್ಥಿತರಿದ್ದರು. ನವೀನ್ ಕುಮಾರ್ ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿ ಸ್ವಾಗತಿಸಿ, ಕೆ ಉಮೇಶ್ ಪಂಜ ವಂದಿಸಿದರು.

LEAVE A REPLY

Please enter your comment!
Please enter your name here