ಬೆನಗಲ್ ವಿಶ್ವಭಾರತ ಕರ್ನಾಟಕ ಪ್ರತಿಷ್ಠಾನದ ವತಿಯಿಂದ ಬ್ರಹ್ಮಾವರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾದ ಹಾರಾಡಿ ನಿತ್ಯಾನಂದ ಶೆಟ್ಟಿ ಮತ್ತು ಸದಸ್ಯರಾದ ಉಮೇಶ ಪೂಜಾರಿ ಇವರನ್ನು ಆತ್ಮೀಯವಾಗಿ ಅಭಿನಂದಿಸಿ ಶುಭಕೋರಲಾಯಿತು.
ಬೆನಗಲ್ ವಿಶ್ವಭಾರತ ಕರ್ನಾಟಕ ಪ್ರತಿಷ್ಠಾನದ ಪೋಷಕಾಧ್ಯಕ್ಷರಾದ ಕೆ.ಅಶೋಕ ಭಟ್ ಚಾಂತಾರು ಇವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಸ್ಥಾಪಕಾಧ್ಯಕ್ಷರಾದ ಸೂರಾಲು ನಾರಾಯಣ ಮಡಿಯವರು ಸ್ವಾಗತಿಸಿದರು. ಬ್ರಹ್ಮಾವರದ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬ್ರಹ್ಮಾವರದ ಅಜಪುರ ಕರ್ನಾಟಕ ಸಂಘದ ಉಪಾಧ್ಯಕ್ಷ ಬಲರಾಮ ಕಲ್ಕೂರ್, ಕಾರ್ಯದರ್ಶಿ ಶ್ರೀ
ಬೈಕಾಡಿ ದಿನಕರ ಶೆಟ್ಟಿ, ಕೋಶಾಧಿಕಾರಿ ಆರ್.ಟಿ.ಭಟ್, ಅಶೋಕ್ ಭಟ್, ಶಂಕರನಾರಾಯಣ ಭಟ್, ಕೆ. ಕೃಷ್ಣಮೂರ್ತಿ, ನಾರಾಯಣ ಮಡಿ, ಭಾಸ್ಕರ ಶೆಟ್ಟಿ, ಗಿರೀಶ್ ಅಡಿಗ, ಮಾದವ ಖಾರ್ವಿ, ರಂಗ ದೇವಾಡಿಗ, ಸೂರ್ಯ ಸಾಲಿಯಾನ್, ಅಲ್ಪೋನ್ ಡಿಸಿಲ್ವ್, ಗಾಯತ್ರಿ ದಿನಮಣಿ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು .

