ವೀಣಾ ಪ್ರಭಾಕರ್ ಉಡುಪಿ ರಾಷ್ಟ್ರ ಮಟ್ಟದ ದ.ರಾ. ಬೇಂದ್ರೆ ಪ್ರಶಸ್ತಿಗೆ ಆಯ್ಕೆ

0
108

ಉಡುಪಿ: ಬೆಳಕು ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಂಸ್ಥೆ ಕೊಡಮಾಡುವ ರಾಷ್ಟ್ರ ಮಟ್ಟದ ದ.ರಾ ಬೇಂದ್ರೆ ಪ್ರಶಸ್ತಿಗೆ ವೀಣಾ ಪ್ರಭಾಕರ್ ಕಡೆಕಾರ್ ಉಡುಪಿ ಇವರು ಆಯ್ಕೆಯಾಗಿರುತ್ತಾರೆ. ಇವರ ಅನೇಕ ಕವನ ಹಾಗೂ ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು ಹಲವಾರು ಬಹುಮಾನಗಳನ್ನು ಪಡೆದು ಅನೇಕ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿ ಗಳಲ್ಲಿ ಭಾಗವಹಿಸಿರುತ್ತಾರೆ. ಕರ್ನಾಟಕ ರಾಜ್ಯ ಬರಹಗಾರ ಸಂಘ ಹೂವಿನಹಡಗಲಿಯಿಂದ ಇವರ ಉತ್ತಮ ಕವಿತೆಗಳು ಮತ್ತು ಬರಹಗಳಿಗಾಗಿ ರಾಷ್ಟ್ರ ಮಟ್ಟದ ಕಾವ್ಯಶ್ರೀ ಪ್ರಶಸ್ತಿಯನ್ನು ನೀಡಿ ಇವರನ್ನು ಗೌರವಿಸಲಾಗಿದೆ.. ಇವರು ಪದವಿ ಮತ್ತು ಸ್ನಾತಕೋತ್ತರ ಪದವಿದಾರರಾಗಿದ್ದು ವೃತ್ತಿ ಪರರಾಗಿರುತ್ತಾರೆ.

LEAVE A REPLY

Please enter your comment!
Please enter your name here