ದಾವಣಗೆರೆಯು ಕರ್ನಾಟಕದ ಹೃದಯ ಭಾಗ. ಇಡೀ ಭಾರತದಲ್ಲಿ ಇಲ್ಲದ ಇತಿಹಾಸ ದಾವಣಗೆರೆಗೆ ಇದೆ. ದಾವಣಗೆರೆಯ ಐತಿಹಾಸಿಕ ಪರಂಪರೆಯನ್ನು ಈಗಿನ ನವ ಪೀಳಿಗೆಗಳಿಗೆ ಅರಿವು ಮೂಡಿಸಬೇಕಾಗಿದೆ. ಬಸವ ಜಯಂತಿಯು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಲೂ ನಡೆಯುತ್ತಿದೆ ಈ ಬಸವ ಜಯಂತಿಯು ಪ್ರಾರಂಭವಾಗಿದ್ದು 1913ನೇ ಇಸವಿಯಲ್ಲಿ ನಗರದ ವಿರಕ್ತಮಠದಲ್ಲಿ ಅದನ್ನು ಪ್ರಾರಂಭಿಸಿದ್ದು ಹರ್ಡೆಕರ್ ಮಂಜಪ್ಪ, ಮೃತ್ಯುಂಜಯಪ್ಪ ಸ್ವಾಮೀಜಿ ಕಣಕುಪ್ಪಿ ಕುಟುಂಬದವರು ದಾವಣಗೆರೆಯಲ್ಲಿ ಹುಟ್ಟಿ ಬೆಳೆದವರು ಪುಣ್ಯವಂತರು ಎಂದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ತಮ್ಮ ಅನುಭಾವ ಅನಿಸಿಕೆ ಹಂಚಿಕೊಂಡರು.
ದಾವಣಗೆರೆಯ ದೊಡ್ಡಪೇಟೆಯ ಶ್ರೀ ವಿರಕ್ತಮಠದ ಹೊರಾಂಗಣದಲ್ಲಿ ಇತ್ತೀಚಿಗೆ ಉತ್ತರ ವಲಯದ ಭಾರತ ಸ್ಕೌಟ್ ಮತ್ತು ಗೈಡ್, ಕರ್ನಾಟಕ ನೇತಾಜಿ ಓಪನ್ ಸ್ಕೌಟ್ ಗ್ರೂಪ್, ಚೇತನ ಓಪನ್ ಸ್ಕೌಟ್ ಗ್ರೂಪ್ ವತಿಯಿಂದ 2025-26ನೇ ಸಾಲಿನ ಸ್ಕೌಟ್ ಗೈಡ್ ದಳವನ್ನು ಪ್ರಾರಂಭದ ಸಮಾರಂಭದಲ್ಲಿ ಶೆಣೈಯವರು ಉದ್ಘಾಟಕರಾಗಿ ಸ್ಕೌಟ್ ಮತ್ತು ಗೈಡ್ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಕಂಠವಸ್ತ್ರ, ಕ್ಯಾಪ್ ಹಾಕಿ ಶೆಣೈಯವರು ಆಶೀರ್ವದಿಸಿದರು.
ಕಲಾಕುಂಚ ಸದಸ್ಯರಾದ ಸಂಗೀತ ಸಾಧಕಿ, ಹಿರಿಯ ಯೋಗ ಪಟು ಮುಕ್ತಾ ಶ್ರೀನಿವಾಸಪ್ರಭು, ನೇತಾಜಿ ಓಪನ್ ಸ್ಕೌಟ್ ಗ್ರೂಪ್‌ನ ಮುಖ್ಯಸ್ಥರಾದ ರಾಮಮೂರ್ತಿ ಬಿ., ಕುಮಾರಿ ತೇಜಸ್ವಿನಿ ಹೆಚ್.ಸುರ್ವೆ ಉಪಸ್ಥಿತರಿದ್ದರು.