ಜೆಜೆಎಂ ವತಿಯಿಂದ ನಡ ಗ್ರಾಮಪಂಚಾಯತಲ್ಲಿ ಹರ್ ಘರ್ ಜಲ್ ಕಾರ್ಯಕ್ರಮ

0
64

ಕನ್ಯಾಡಿ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವೆಂದು ಘೋಷಣೆ

ನಡ: ಜಲ ಜೀವನ್ ಮಿಷನ್ ಅಡಿಯಲ್ಲಿ ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮ ಪಂಚಾಯತಿಯ ಕನ್ಯಾಡಿ ಗ್ರಾಮವನ್ನು ಸೋಮವಾರದಂದು ಹರ್ ಘರ್ ಜಲ್ ಗ್ರಾಮವೆಂದು ಘೋಷಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಬೆಳ್ತಂಗಡಿ ಇವರ ಮಾರ್ಗದರ್ಶನದಲ್ಲಿ ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಇವರು ಕನ್ಯಾಡಿ ಗ್ರಾಮವನ್ನು ಹರ್ ಗರ್ ಜಲ್ ಗ್ರಾಮ ಎಂದು ಘೋಷಣೆ ಮಾಡಿದರು.

ಈ ವೇಳೆ ನಡ ಪಂಚಾಯತ್ ಉಪಾಧ್ಯಕ್ಷ ಜಯ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಡಿಪಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ನೀರು ನೈರ್ಮಲ್ಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಿಪಿಎಂ ವಿಜ್ಞೇಶ್ ರಾಜ್, ಇಂಜಿನಿಯರ್ ಲಿಖಿತ, ಐಎಸ್ಎ ಯ ಶಿವರಾಂ ಪಿಬಿ ಸಹಕರಿಸಿದರು.

LEAVE A REPLY

Please enter your comment!
Please enter your name here