ಮುಲ್ಕಿ:ಶ್ರೀ ಬಪ್ಪನಾಡು ಸೌಹಾರ್ದ ಸಹಕಾರಿಸಂಘ ದ 2024-25 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಪುನರೂರು ಕಾಂಪ್ಲೆಕ್ಸ್ ಬಳಿಯ ಪುತ್ರನ್ ಸಭಾಭವನದಲ್ಲಿ ನಡೆಯಿತು
ಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ ಕಳೆದ ಸಾಲಿನ ವರ್ಷದಲ್ಲಿ ಮುಲ್ಕಿ ಮತ್ತು ಹಳೆಯಂಗಡಿ ಶಾಖೆಯನ್ನೊಳಗೊಂಡು ಒಟ್ಟು1820 ಸದಸ್ಯರ ರೂ.21ಲಕ್ಷ 83ಸಾವಿರ ಪಾಲು ಬಂಡವಾಳದೊಂದಿಗೆ ರೂ.31ಕೋಟಿ 10ಲಕ್ಷ ವ್ಯವಹಾರ ನಡೆಸಿ ರೂ.8,76.63 ಸಾವಿರ ಠೇವಣಿ ಸಂಗ್ರಹಿಸಲಾಗಿದ್ದು ಸದಸ್ಯರಿಗೆ ವಿವಿಧ ರೂಪದ ಸಾಲವಾಗಿ ರೂ.7ಕೋಟಿ 45ಸಾವಿರ ಸಾಲ ನೀಡಲಾಗಿದೆ.ಆರ್ಥಿಕ ವರ್ಷದಲ್ಲಿ ಸಹಕಾರಿಯು ರೂ.21ಲಕ್ಷ 49 ಸಾವಿರ ಲಾಭಗಳಿಸಿದ್ದು ಸದಸ್ಯರಿಗೆ ಶೇ. 10% ಡಿವಿಡೆಂಡ್ ನೀಡಲಾಗಿದೆ ಎಂದರು
ಸಂಸ್ತೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಸಹಕಾರಿಯ ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರಗಳು ಹಾಗೂ 2024-25 ರ ವಾರ್ಷಿಕ ಆಯ-ವ್ಯಯ ವನ್ನು ಮಂಡಿಸಿ ವರ್ಷದಲ್ಲಿ ಕ್ರಮಬದ್ಧವಾಗಿ ಉಳಿತಾಯ, ಆಂತರಿಕ ಸಾಲ ನಿರ್ವಹಣೆ, ಬ್ಯಾಂಕ್ ಸಾಲ ಮತ್ತು ಕ್ರಮಬದ್ಧವಾದ ಸಾಲ ಮರುಪಾವತಿಯಲ್ಲಿ ಸಾಧನೆಗೈದ ಸ್ವ-ಸಹಾಯ ಗುಂಪುಗಳಾದ ಫಲ್ಗುಣಿಸ್ವ-ಸಹಾಯ ಸಂಘ ಕೊಲ್ಲೂರು-ಮುಲ್ಕಿ ಮತ್ತು ಸಿರಿಗಂಧ ಸ್ವ-ಸಹಾಯ ಸಂಘ ಕೆರೆಕಾಡು-ಮುಲ್ಕಿ ರವರನ್ನು ಗೌರವಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಜಯ ಮುದ್ದು ಶೆಟ್ಟಿ – ಯೋಗಕ್ಷೇತ್ರದಲ್ಲಿ, ಮೋಹನ್‌ರಾವ್‌ಎಸ್.-ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಡಾ| ಹರಿಶ್ಚಂದ್ರ ಪಿ.ಸಾಲ್ಯಾನ್-ಪತ್ರಿಕಾಕ್ಷೇತ್ರದಲ್ಲಿ ಸಾಧನೆಗೈದವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ಶ್ಯಾಮ್ ಪ್ರಸಾದ್, ಆಡಳಿತ ಮಂಡಳಿ ನಿರ್ದೇಶಕರಾದ ಕಸ್ತೂರಿ ಪಂಜ, ಸಂಪತ್‌ಕಾರ್ನಾಡ್, ಕೆ.ಉಮೇಶ್ ಪಂಜ, ಜಯಾನಂದ ಎ. ರಾವ್, ಎಂ.ರಮಾನಾಥ ಪೈ, ,ಅರುಣ್ ಭಂಡಾರಿ, ಶೈಲೇಶ್‌ಕುಮಾರ್, ಶಕುಂತಳಾ ವಿ.ಬಂಗೇರ, ಉಪಸ್ಥಿತರಿದ್ದರು. ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಸ್ವಾಗತಿಸಿದರು
ಸಿಬ್ಬಂದಿ ಚರಿಷ್ಮಾಕಾರ್ಯಕ್ರಮ ನಿರೂಪಿಸಿದರು, ನಿರ್ದೇಶಕ ಕೆ. ಉಮೇಶ್ ಪಂಜ ವಂದಿಸಿದರು.