ಬೈಂದೂರು ತಾಲ್ಲೂಕಿನ ಉಪ್ರಳ್ಳಿಯ ಕರಸ್ಥಳ ಜಗದ್ಗುರು ಶ್ರೀ ನಾಗಲಿಂಗ ಸ್ವಾಮಿ ಹಾಗೂ ಶ್ರೀ ವಿಶ್ವಕರ್ಮ ಸಾನಿಧ್ಯವಿರುವ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಮಂಗಳವಾರ ನಡೆದ ವಾರ್ಷಿಕ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮ ಮತ್ತು ತ್ರಾಸಿಯಿಂದ ಉಪ್ರಳ್ಳಿ ದೇವಸ್ಥಾನದವರೆಗೆ ನಡೆದ ವಾಹನ ಜಾಥಾಕ್ಕೆ ವಿಶ್ವಕರ್ಮ ಪ್ರತಿಮೆಗೆ ಪುಷ್ಪಾರ್ಚನೆ
ಸಂಭ್ರಮದಲ್ಲಿ ನೆಡೆಯಿತು
ಶಾಸಕ ಗುರುರಾಜ ಗಂಟೆಹೊಳೆ ವಾಹನ ಜಾತಕ್ಕೆ ಚಾಲನೆ ನೀಡಿ ಮಾತನಾಡಿ ದುಡಿಮೆ ಹಾಗೂ ಶ್ರಮಕ್ಕೆ ಇನ್ನೊಂದು ಹೆಸರೇ ವಿಶ್ವಕರ್ಮರು, ಆದ್ದರಿಂದ ಪ್ರಧಾನಮಂತ್ರಿಗಳು ಕೂಡ ದುಡಿಯುವ ವರ್ಗಕ್ಕಾಗಿ ವಿಶ್ವಕರ್ಮ ಹೆಸರಿನ ಯೋಜನೆಯನ್ನು ತಂದಿದ್ದಾರೆ ಈ ಮೂಲಕ ವಿಶ್ವಕರ್ಮರು ಎಲ್ಲಾ ಸಮಾಜಕ್ಕೂ ಮಾದರಿಯಾಗಿದ್ದಾರೆ ಎಂದರು.
ಉಪ್ರಳ್ಳಿ ಎನ್.ವಿ.ಕೆ. ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಎಲ್ಲಾ ವಿಶ್ವಕರ್ಮ ಸಮಾಜ ಬಾಂಧವರ ಸಹಕಾರದಿಂದ ದೇವಿಗೆ ಸುಮಾರು 1.25 ಕೋಟಿ ವೆಚ್ಚದ ಸ್ವರ್ಣ ಮುಖವಾದವನ್ನು ಸಮರ್ಪಿಸಲಾಗಿದೆ. ಪ್ರತಿ ಶುಕ್ರವಾರ ಅನ್ನಸಂತರ್ಪಣೆ ನಡೆಯುತ್ತಿದೆ. ಮುಂದೆಯೂ ಕೂಡ ದೇವಳದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕಾಗಿ ವಿನಂತಿಸಿಕೊಂಡರು.
ಸಮಾಜದ ಹಿರಿಯ ಕುಲಕಸುಬುದಾರರಾದ ಕುಪ್ಪಯ್ಯ ಆಚಾರ್ಯ ಅಂಬಾಗಿಲು ಹಾಗೂ ನಾಗಪ್ಪಯ್ಯ ಆಚಾರ್ಯ ಮಾರಣಕಟ್ಟೆ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೂರನೇ ಮೊಕ್ತೇಸರ ಶ್ರೀಧರ ಆಚಾರ್ಯ ಮರವಂತೆ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅಶೋಕ್ ವಿ. ಆಚಾರ್ಯ ನಾವುಂದ, ಸೇವಾ ಸಮಿತಿಯ ಅಧ್ಯಕ್ಷ ದಿನೇಶ ಆಚಾರ್ಯ ಮರವಂತೆ, ಆರೋಗ್ಯ ಸಮಿತಿ ಅಧ್ಯಕ್ಷ ದಿವಾಕರ ಆಚಾರ್ಯ ಮಾರಣಕಟ್ಟೆ, ಮಹಿಳಾ ಸಮಿತಿ ಅಧ್ಯಕ್ಷೆ ಶೈಲಾ ರಾಮಕೃಷ್ಣ ಆಚಾರ್ಯ ಉಪ್ಪುಂದ, ಕುಂದಾಪುರ ಹಾಗೂ ಬೈಂದೂರು ತಾಲೂಕು ಕಾರ್ಪೆಂಟರ್ ಯೂನಿಯನ್ ಅಧ್ಯಕ್ಷ ಮಹೇಶ ಆಚಾರ್ಯ ಉಪ್ಪುಂದ, ಗುರುಸೇವಾ ಪರಿಷತ್ ಅಧ್ಯಕ್ಷ ಲಕ್ಷ್ಮಣ ಆಚಾರ್ಯ ಮಟ್ನಕಟ್ಟೆ, ದೇವಸ್ಥಾನದ ವ್ಯಾಪ್ತಿಯ ಎಲ್ಲಾ ವಿಶ್ವಕರ್ಮ ಸಂಘದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಮಹಿಳಾ ಸಮಿತಿ ಸದಸ್ಯರು ಪ್ರಾರ್ಥಿಸಿದರು.
ಎರಡನೇ ಮೊಕ್ತೇಸರ ಉದಯ ಆಚಾರ್ಯ ಕಟ್‌ಬೆಲ್ತೂರು ಸ್ವಾಗತಿಸಿದರು. ಕಾಳಿಕಾಂಬಾ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಲ್ಲೂರು ವಿಶ್ವಕರ್ಮ ಸಂಘದ ಕಾರ್ಯದರ್ಶಿ ಸದಾನಂದ ಆಚಾರ್ಯ ವಂದಿಸಿದರು, ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಕೊಡ್ಲಾಡಿ ನಿರೂಪಿಸಿದರು.