ಉಡುಪಿ: ಹಿಂದಿನ ಕಾಲದಲ್ಲಿ ಅಜ್ಜ ಅಜ್ಜಿಯರ ಜೊತೆಯಲ್ಲಿ ಮಕ್ಕಳು ಬೆಳೆಯುತ್ತಿದ್ದರು. ಅಜ್ಜ ಅಜ್ಜಿಯರ ಜೀವನದ ಅನುಭವ ಮುಂದಿನ ಜನಾಂಗಕ್ಕೆ ದಾರಿ ದೀಪ. ಅವರು ಸಮಾಜದ ಆಸ್ತಿ ಎಂದು ಸಮಾನ ಮಾನಸ್ಯ ಕನ್ನಡಿಗರ ವೇದಿಕೆ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ.ಎನ್. ಹೇಳಿದರು.
ಭಾನುವಾರ ಕುಂಜಿಬೆಟ್ಟು ಸಗ್ರಿವಾರ್ಡ್ನಲ್ಲಿ ಸಮಾನ ಮಾನಸ್ಕ ಕನ್ನಡಿಗರ ವೇದಿಕೆಯಿಂದ ನಡೆದ ಅಜ್ಜ ಅಜ್ಜಿಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವೇದಿಕೆಯ ಸದಸ್ಯೆ ರೇಣುಕಾ ಮಾತನಾಡಿ, ಮಜ್ಜಿಗೆ ಇಲ್ಲದ ಊಟ ಮತ್ತು ಅಜ್ಜ ಅಜ್ಜಿ ಇಲ್ಲದ ಮನೆ ಎರಡು ಒಂದೇ ಆಗಿದೆ. ಊಟಕ್ಕೆ ಮಜ್ಜಿಗೆ ಅಗತ್ಯ. ಅದೇ ರೀತಿ ಮನೆಗೆ ಅಜ್ಜ&ಅಜ್ಜಿ ಭೂಷಣ ಎಂದರು.
ವೇದಿಕೆಯ ಸದಸ್ಯರಾದ ಲಕ್ಷಿ$್ಮ, ವಿಜಯಲಕ್ಷಿ$್ಮ, ಸುರೇಶ್ , ಅನುರಾಧ ಜಿ.ಎಸ್., ವಾಣಿ, ಗೀತಾ ಮುರಳಿ, ಶ್ರೀದೇವಿ, ಜಯಶ್ರೀ, ರಾಮಕೃಷ್ಣ, ಪ್ರಭಾ, ಕಾವ್ಯ, ರಾಘವೇಂದ್ರ ಎಸ್., ವಾಸು ಪಿ., ಸುನಿತಾ, ಸಂಗೀತಾ, ವಿದ್ಯಾ, ವಿಜಯ, ಕೃಷ್ಣಾ ಕೆ., ಪ್ರಸಾದ್ ಕೆ. ಚಂದ್ರಕಾಂತ್ ಮುಂತಾದವರು ಉಪಸ್ಥಿತರಿದ್ದರು.