ಅಂತರಾಷ್ಟ್ರೀಯ ಸಂಘಟನೆಯ ಶಾಖೆಯಾದ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ನಾರ್ಥ್ ಸಂಘಟನೆಯವರು ಹುಬ್ಬಳ್ಳಿ ಕ್ಲಬ್ ರೋಡನಲ್ಲಿರುವ ಜೆಮಖಾನಾ ಸಭಾಂಗಣದಲ್ಲಿ ಸಪ್ಟೆಂಬರ್ ೧೫, ಸೋಮವಾರದಂದು ರಾತ್ರಿ ೯ಗಂಟೆಗೆ ಹುಬ್ಬಳ್ಳಿ ಶಹರದ ಮಂಜುನಾಥ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರಿಯಾಶೀಲ ಸಹ ಶಿಕ್ಷಕರಾದ ಸುಭಾಷ್ ಚವ್ಹಾಣ ರವರಿಗೆ ಮುತ್ತಿನ ಹಾರ ಹಾಕಿ, ಸಫಲ ಪುಷ್ಪ ಗುಚ್ಛ ನೀಡಿ, ಶಾಲು ಹೊದಿಸಿ, ಸ್ಮರಣಿಕೆ, ಪ್ರಶಸ್ತಿ ಫಲಕ ಸಹಿತ’ ೨೦೨೫ – ೨೬ನೇ ಸಾಲಿನ ಹಿರಿಮೆಯ ಶಿಕ್ಷಕ (teacher excellence award) ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಅಭಿನಂದಿಸಿದೆ.ಶಾಲಾ ಸಮಯದ ಕರ್ತವ್ಯದ ಜೊತೆಗೆ ಶಾಲಾವಧಿಯ ನಂತರವು ಶಾಲಾ ಅಭಿವೃದ್ಧಿಗೆ ಸಹಕರಿಸಿ ಮಕ್ಕಳ ಬೌದ್ಧಿಕ ವಿಕಾಸಕ್ಕೆ ನಿರಂತರ ಸೇವೆ ಮಾಡುತ್ತಿರುವುದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಡಿಜಿ ಆಪಿಸಿಯಲ್ ವಿಜಿಟ್ ಮತ್ತು ಪಬ್ಲಿಕ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಮುಖ್ಯ ಅತಿಥಿಗಳಾದ ಡಿಸ್ಟ್ರಿಕ್ಟ್ ಗವರ್ನರ್ ರೋಟೆರಿಯನ್ ಅರುಣ ಭಂಡಾರಿಯವರು ಹೇಳಿದರು. ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅವರ್ಣನೀಯ ಎಂದು ಗೌರವ ಉಪಸ್ಥಿತಿಯಲ್ಲಿದ್ದ ಅಸಿಸ್ಟೆಂಟ್ ಗವರ್ನರ್ ರೋಟೆರಿಯನ್ ಮಡಿವಾಳಪ್ಪ ಜುಂಜುಣ್ಣವರ ಹರ್ಷವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಸೈನಾಭಿ ನದಾಫ, ಪತ್ತಾರ, ಕವಿತಾ ಹೆಗಡೆಯವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ನಾರ್ಥನ ಅಧ್ಯಕ್ಷರಾದ ರೋಟೆರಿಯನ್ ಗುರುಸಾಲಿಮಠ, ವ್ಯವಸ್ಥಾಪಕರಾದ ರೋಟೆರಿಯನ್ ಗಿರೀಶ ಮಾಳವಾಡಿ, ಕಾರ್ಯದರ್ಶಿಗಳಾದ ರೋಟೆರಿಯನ್ ಸುಹಾಸಿನಿ ದೇಸಾಯಿ ಮತ್ತಿತರರು ವೇದಿಕೆಯಲ್ಲಿ ಇದ್ದರು.ಭಾರತ ರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚಾರಣೆ ನಿಮಿತ್ತ ಸಪ್ಟೆಂಬರ್ ೬ರಂದು ನಡೆದ ಹುಬ್ಬಳ್ಳಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎಸ್. ಸಿ, ಎಸ್.ಟಿ ಪ್ರಾಥಮಿಕ ಶಾಲಾ ಕ್ಷೇಮಾಭಿವೃದ್ಧಿ ಸಂಘ, ಹುಬ್ಬಳ್ಳಿ ಶಹರ ಘಟಕವು ಸುಭಾಷರವರ ೧೯ ವರ್ಷಗಳ ಬಹುಶೃತ ವಿದ್ಯಾರ್ಥಿ ಮುಖಿ ಶೈಕ್ಷಣಿಕ ಪ್ರಗತಿಯ ಮತ್ತು ಸಾರ್ಥಕ ಸೇವೆಯನ್ನು ಅವಲೋಕಿಸಿ ತಾಲ್ಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.ಬೆಂಗಳೂರಿನ ರಾಷ್ಟ್ರೀಯ ದೇಹಾಂಗ ದಾನ ಜಾಗೃತಿ ಸಮಿತಿ(ರಿ.)ಯು ಸುಭಾಷ್ ರವರು ಶಾಲಾ ಅವಧಿಯ ನಂತರವು ಮಕ್ಕಳ ಕಲ್ಯಾಣಕ್ಕೆ ಅವಿರತ ಶ್ರಮಿಸಿದ್ದು ಇದನ್ನು ಗಮನಿಸಿ ರಾಷ್ಟ್ರೀಯ ದೇಹಾಂಗ ದಾನ ಜಾಗೃತಿ ಸಮಿತಿಯು(ರಿ.) ಇವರಿಗೆ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯ ದಿನ ಸಪ್ಟೆಂಬರ್ 5 ರಂದು ೨೦೨೫-೨೬ನೇ ಸಾಲಿನ ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದೆ.೨೦೨೫ – ೨೬ನೇ ಸಾಲಿನಲ್ಲಿ ಹಿರಿಮೆಯ ಶಿಕ್ಷಕ, ಉತ್ತಮ ಶಿಕ್ಷಕ ಹಾಗೂ ಆದರ್ಶ ಶಿಕ್ಷಕ ರತ್ನ ತ್ರಿವಳಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಶಿಕ್ಷಕ ಸಾಹಿತಿ ಸುಭಾಷ್ ಚವ್ಹಾಣ ರವರಿಗೆ ಶಾಲಾಭಿವೃದ್ಧಿ ಅಧ್ಯಕ್ಷರಾದ ಭೀಮಪ್ಪ ಸುಣಗಾರ ಹಾಗೂ ಸರ್ವ ಸದಸ್ಯರು, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮುಖ್ಯೋಪಾಧ್ಯಾಯರಾದ ಹೆಚ್. ಬಿ. ಕೊರವರ ಮತ್ತು ಹೆಚ್. ಎಂ. ಕುಂದರಗಿ, ಎಸ್. ಎಸ್. ಟಿ ಶಿಕ್ಷಕ ಸಂಘದ ಅಧ್ಯಕ್ಷರಾದ ಮೋತಿಲಾಲ ರಾಠೋಡ, ಕಾರ್ಯದರ್ಶಿಗಳಾದ ರಾಜೇಂದ್ರ ಬಿದರಿ, ಹಿರಿಯ ಶಿಕ್ಷಕ ಸಂಘಟಕರಾದ ಕೆ. ಬಿ. ಕುಬಿಹಾಳ, ಕೆ. ಎಂ. ಗೆದಗೇರಿ,ಶಾಲಾ ಹಿರಿಯ ಶಿಕ್ಷಕಿಯರಾದ ಸಾವಿತ್ರಿ ಹರನಾಳ, ಮಂಜುಳಾ ಸಾತಪುತೆ, ಕುಸುಮಾ ಚಕ್ರಸಾಲಿ, ಸೈನಾಬಿ ನದಾಫ, ರೂಪ ಹೆಬ್ಬಳ್ಳಿ, ವಿಜಯಾ, ಪ್ರಕಾಶರವರು ಅಭಿನಂದಿಸಿದ್ದಾರೆ.
Home Uncategorized ಸುಭಾಷ ಚವ್ಹಾಣರವರಿಗೆ ಒಲಿದು ಬಂದ ಉತ್ತಮ ಶಿಕ್ಷಕ, ಆದರ್ಶ ಶಿಕ್ಷಕ ರತ್ನ ಮತ್ತು ಹಿರಿಮೆಯ ಶಿಕ್ಷಕ...