ಫೋಟೋಗ್ರಫಿಯಲ್ಲಿ ಅಪಾರ ಅವಕಾಶಗಳಿವೆ: ಡಾ. ವೀರೇಂದ್ರ ಹೆಗ್ಗಡೆ

0
90

ಉಜಿರೆ: ಫೋಟೋಗ್ರಫಿಯಲ್ಲಿ ಇಂದು ಅಪಾರ ಅವಕಾಶಗಳಿದ್ದು, ಭಾವನೆಗಳನ್ನು ಅರ್ಥಮಾಡಿಕೊಂಡು ಸಂದರ್ಭೋಚಿತವಾಗಿ ತಾಳ್ಮೆಯಿಂದ ಫೋಟೊ ತೆಗೆಯಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದರು.
ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಫೋಟೊಗ್ರಫಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.
ಹಾಸನದ ಮಂಗಳಾ, ರೂಪಾ, ಮಂಡ್ಯದ ಮಧುಕರ್ ತರಬೇತಿ ಬಗ್ಗೆ ಅನುಭವ, ಅನಿಸಿಕೆ ವ್ಯಕ್ತಪಡಿಸಿದರು.
ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಉಪನ್ಯಾಸಕ ಕರುಣಾಕರ ಜೈನ್ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here