ಸೈಲಸ್ ಪದವಿ ಪೂರ್ವ ಕಾಲೇಜು: ಆರೋಗ್ಯ ಸುರಕ್ಷತೆ ಹಾಗೂ ವಿಪತ್ತು ನಿರ್ವಹಣೆ ಕಾರ್ಯಕ್ರಮ

0
69


ಬೆಂಕಿ ಅವಘಡಗಳು, ಹೃದಯ ಸ್ತಂಭನದಂತಹ ಅಪಾಯಗಳು ಯಾವುದೇ ಮುನ್ಸೂಚನೆ ನೀಡದೆ ಘಟಿಸುತ್ತವೆ.
ಯಾವುದೇ ರೀತಿಯ ಅಗ್ನಿ ಅವಘಡಗಳು ಸಂಭವಿಸಿದಾಗ , ಆತ್ಮವಿಶ್ವಾಸ ಕಳೆದುಕೊಳ್ಳದೆ ಬೆಂಕಿ ನಂದಿಸುವ ವಿವಿಧ ಕ್ರಮಗಳ ಬಗ್ಗೆ ತಕ್ಷಣ ಜಾಗೃತರಾಗಬೇಕು. ಹೃದಯಾಘಾತಕ್ಕೊಳಗಾದ ಹಾಗೂ ನೀರಿನಲ್ಲಿ ಮುಳುಗಿದ ವ್ಯಕ್ತಿಗಳಿಗೆ ಸೂಕ್ತ ಸಮಯದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದರೆ ಅವರನ್ನು ಅಪಾಯದಿಂದ ರಕ್ಷಿಸಬಹುದು. ಈ ಬಗ್ಗೆ ವಿದ್ಯಾರ್ಥಿ ಜೀವನದಲ್ಲೇ, ನುರಿತ ವ್ಯಕ್ತಿಗಳಿಂದ ತರಬೇತಿ ಪಡೆದರೆ ವಿಪತ್ತುಗಳು ಸಂಭವಿಸಿದಾಗ ಆತ್ಮವಿಶ್ವಾಸದಿಂದ ಅವುಗಳನ್ನು ಎದುರಿಸಬಹುದು, ಎಂದು ಆರೋಗ್ಯ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆ ಅರಿವು ಅಭಿಯಾನದಡಿಯಲ್ಲಿ ತರಬೇತಿ ಮಾರ್ಗದರ್ಶನ ನೀಡುತ್ತಿರುವ ಮಂಗಳೂರಿನ ವೃತ್ತಿಪರ ಸ್ವತಂತ್ರ ಅಗ್ನಿ ಮತ್ತು ಸುರಕ್ಷತಾ ಅಧಿಕಾರಿ ಸತ್ಯರಾಜ್ ಹೇಳಿದರು.
ಅವರು ಸೈಲಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆರೋಗ್ಯ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆ ಕುರಿತಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ಹಾಗೂ ಮಾಹಿತಿ ನೀಡಿದರು. ಉಪನ್ಯಾಸಕ ನವೀನ್ ಸ್ವಾಗತಸಿದರು. ಪ್ರಭಾ ಕಾರ್ಯಕ್ರಮ ನಿರೂಪಿಸಿದರು. ಜಾಯ್ಲಿನ್ ಮತ್ತು ಆಯೇಷಾ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here