ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ; ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಹಿನ್ನೆಲೆ ಗೋಶಾಲೆಗೆ ಧನಸಹಾಯ, ಅಶಕ್ತ ಕುಟುಂಬಗಳಿಗೆ ನೆರವು

0
106

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಯವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕಳೆoಜ ನಂದಗೋಕುಲ ಗೋಶಾಲೆಗೆ ರೂ.10.000/- ಧನಸಹಾಯ ಹಾಗೂ ಅಶಕ್ತ ಕುಟುಂಬಗಳಾದ ಕುವೆಟ್ಟು ಗ್ರಾಮದ ನೆರೋಲ್ ಕಟ್ಟೆ ಹೊನ್ನಪ್ಪ ಪೂಜಾರಿ ಹಾಗೂ ಪಡoಗಡಿ ಗ್ರಾಮ ಬರಾಯ ದಿನೇಶ್ ಆಚಾರ್ಯ ಈ ಮನೆಗಳಿಗೆ ಆಹಾರಧಾನ್ಯ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಮಂಡಲ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಕುವೆಟ್ಟು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಪಂಚಾಯತ್ ಸದಸ್ಯೆ ಸುಮಂಗಲ ಪ್ರಭು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here