ಸುಳ್ಯ/ಮೈಸೂರು: ಪ್ರತಿ ವರ್ಷ 10 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ 11 ದಿನಗಳ ಕಾಲ ನಡೆಯಲಿದೆ. ದಸರಾ ಇತಿಹಾಸದಲ್ಲೇ ಬಹುತೇಕ ಇದೇ ಮೊದಲ ಬಾರಿಗೆ 11 ದಿನದ ದಸರಾ ಬಂದಿದೆ.

ಹೌದು. ಪಂಚಾಂಗದ ತಿಥಿಗಳ ಪ್ರಕಾರ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ಅಂದ್ರೆ 11 ದಿನ ದಸರಾ ಉತ್ಸವ ನಡೆಯಲಿದೆ. ಸೆ.24 ರಂದು ಬರುವ ಪಂಚಮಿ ತಿಥಿ 25ಕ್ಕೂ ಮುಂದುವರಿಯುವ ಕಾರಣ ದಸರಾ 11 ದಿನ ಆಗಲಿದೆ. ಇನ್ನು ವಿಶೇಷವಾಗಿ ದಸರಾ ವಿಶೇಷತೆಯ ನಂಟು ತುಳುನಾಡಿಗೆ ಬೆಸೆದುಕೊಂಡಿದೆ. ತುಳುನಾಡಿನ ಸಂಸ್ಕೃತಿ ಬಂಬಿಸುವ ಗಂಡುಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನ ಐತಿಹಾಸಿಕ ಮೈಸೂರು ದಸರಾದಲ್ಲಿ ಪ್ರದರ್ಶನವಾಗಲಿದೆ.
ಹೌದು, ಸುಳ್ಯ ತಾಲೂಕಿನ ಮಂಡೆಕೋಲು ಗ್ರಾ.ಪಂ. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ರಂಜಿನಿ ಮಕ್ಕಳ ಯಕ್ಷಗಾನ ಕಲಾ ತಂಡ ಅರಿವು ಕೇಂದ್ರ ಮಂಡೆಕೋಲು ಇದರ ಬಾಲ ಕಲಾವಿದರಿಂದ ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ಸೆ. 23ರಂದು ರಾತ್ರಿ 7-00 ಗಂಟೆಯಿಂದ ಮಹಿಷ ಮರ್ಧಿನಿ ಎಂಬ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.

