ಜೇಸಿಐ ಮುಂಡ್ಕೂರು ಭಾರ್ಗವದ ಜೇಸಿ ಸಪ್ತಾಹ “ವಸಂತ ಪರ್ವ”ದ 2ನೇ ದಿನದ ಕಾರ್ಯಕ್ರಮ

0
148

ಮೂಡುಬಿದಿರೆ: ಜೇಸಿಐ ಮುಂಡ್ಕೂರು ಭಾರ್ಗವದ ಜೇಸಿ ಸಪ್ತಾಹ-2025 ” ವಸಂತ ಪರ್ವ” ದ 2ನೇ ದಿನದ ಕಾರ್ಯಕ್ರಮವಾಗಿ ಶ್ರೀ ಗಣೇಶ ದರ್ಶನ ಸಭಾಭವನ ಪಲ್ಕೆ ಕಡಂದಲೆಯಲ್ಲಿ ದಿನಾಂಕ 10/9/2025 ರಂದು ಜರಗಿತು.

ಜೇಸಿ ಅಧ್ಯಕ್ಷರಾದ ವಸಂತ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಲl ಸತ್ಯಶಂಕರ ಶೆಟ್ಟಿ ರವರು ಜೇಸಿಯಿಂದ ಜನರಿಗೆ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾದ ಕೆ ಸುದರ್ಶನ ಶೆಟ್ಟಿ ,(ಸಂಚಾಲಕರು ಶ್ರೀ ಸುಬ್ರಮಣ್ಯ ಪ್ರೌಢ ಶಾಲೆ ಕಡಂದಲೆ ), ಚಂದ್ರಶೇಖರ ಶೆಟ್ಟಿ, ಹರೀಶ್ ಶೆಟ್ಟಿ ಹೋಯ್ಗೆ ಮನೆ ಹಾಗೂ ದಿನೇಶ ದೇವಾಡಿಗ (ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರು ) ಉಪಸ್ಥಿತರಿದ್ದರು, ಕಾರ್ಯಕ್ರಮ ನಿರ್ದೇಶಕರಾದ JC ಸಂಪತ್ ರಾಜ್ ಧನ್ಯವಾದ ಮಾಡಿದರು. ನಂತರ ಬಂಟರ ಸಂಘ, ಕಡಂದಲೆ ಪಾಲಡ್ಕ ಮಹಿಳಾ ಸದಸ್ಯರು ಮತ್ತು ಸ್ಥಳೀಯ ಪ್ರತಿಭೆಗಳು ಮತ್ತು ಜೇಸಿಐ ಮುಂಡ್ಕೂರು ಭಾರ್ಗವದ ಸದಸ್ಯರಿಂದ ನೃತ್ಯ ಕಾರ್ಯಕ್ರಮ ನೆರವೇರಿತು.

ವರದಿ: ಜಗದೀಶ್‌ ಪೂಜಾರಿ ಕಡಂದಲೆ

LEAVE A REPLY

Please enter your comment!
Please enter your name here