
ವಿಶ್ವ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನಾಚರಣೆಯ ಪ್ರಯುಕ್ತ ಇಂದಿನಿಂದ 7 ದಿನಗಳ ತನಕ (ಸೆ.18 ರಿಂದ ಸೆ.24ರ ವರೆಗೆ) ಪ್ರತೀ ದಿನ ಸಂಜೆ ಗಂಟೆ 6.20ಕ್ಕೆ ಮಣಿಪಾಲದ ‘ಐನಾಕ್ಸ್’ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಕಿರು ಚಲನಚಿತ್ರ ‘ಚಲೋ ಜೀತೇ ಹೆ’ ಪ್ರದರ್ಶನಗೊಳ್ಳಲಿದೆ.
ಎಲ್ಲರಿಗೂ ಪ್ರೇರಣಾದಾಯಕವಾಗಿರುವ ಈ ಕಿರು ಚಲನಚಿತ್ರವನ್ನು ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರ ಸಹಿತ ವಿವಿಧ ಸ್ತರದ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಸಮಾಜದ ಗಣ್ಯರು, ಪ್ರಬುದ್ದರೊಂದಿಗೆ ವೀಕ್ಷಿಸುವಂತೆ ಕೋರಲಾಗಿದೆ.
ಇಂದು ಸಂಜೆ ಗಂಟೆ 6.20ಕ್ಕೆ ಮಣಿಪಾಲದ ಐನಾಕ್ಸ್ ಥೀಯೇಟರ್ ನಲ್ಲಿ ನಡೆಯಲಿರುವ ಮೊದಲ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಸದಸ್ಯರು ಈ ಕೆಳಗಿನ ಮೊಬೈಲ್ ನಂಬರನ್ನು ಸಂಪರ್ಕಿಸಿ ಕೂಡಲೇ ತಮ್ಮ ಹೆಸರನ್ನು ನೊಂದಾಯಿಸಿ ಸಂಜೆ ಗಂಟೆ 6.00ಕ್ಕೆ ಮಣಿಪಾಲದ ಐನಾಕ್ಸ್ ಮಿನಿ ಥೀಯೇಟರ್ ನಲ್ಲಿ ಉಪಸ್ಥಿತರಿರುವಂತೆ ಸೂಚಿಸಲಾಗಿದೆ.
ಸಂಪರ್ಕ ಮೊಬೈಲ್ ಸಂಖ್ಯೆ: 96066 98577 (ದಿನೇಶ್ ಅಮೀನ್), 93431 60575 (ಚಂದ್ರಶೇಖರ್ ಪ್ರಭು).
