ಶಾಲಾ ಶಿಕ್ಷಣ ಇಲಾಖೆ ಮತ್ತು ಸುಜ್ಞಾನ್ ಎಜುಕೇಶನ್ ಟ್ರಸ್ಟ್, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ ಮತ್ಯಾಡಿ ಇವರ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ 17 ರ ವಯೋಮಾನದ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಸರಕಾರಿ ಪ್ರೌಢಶಾಲೆ ಹೊಸಂಗಡಿ ಬಾಲಕಿಯರ ತಂಡ “ಪ್ರಥಮ” ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ತಂಡದಲ್ಲಿ ಜುಲ್ಫಾ ,ಶ್ರೀರಕ್ಷಾ, ಅವಳಿ ಸಹೋದರಿಯರು ರೇಷ್ಮಾ, ರೇವತಿ, ಮಿಝಾನಾ, ಅನುಷಾ, ರಕ್ಷಿತಾ, ನವ್ಯಾ ನಂದಿತಾ, ಶ್ವೇತಾ, ಸಾನ್ವಿ, ಮತ್ತು ತನ್ಜಿಲಾ ಭಾಗವಹಿಸಿದ್ದರು. 9 ನೇ ತರಗತಿಯ ಜುಲ್ಫಾ “ಬೆಸ್ಟ್ ಅಟ್ಯಾಕರ್” ಪ್ರಶಸ್ತಿ ಗಳಿಸಿರುತ್ತಾರೆ. ಇವರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ವೀರರಾಜೇಂದ್ರ ಹೆಗ್ಡೆ ಅವರ ನೇತೃತ್ವದಲ್ಲಿ ತರಬೇತಿ ಪಡೆದಿದ್ದು, ಇವರನ್ನು ಪ್ರಭಾರ ಮುಖ್ಯೋಪಾಧ್ಯಾಯರಾದ ಗುರುಪ್ರಸಾದ್ H ಇವರು ಪ್ರೋತ್ಸಾಹಿಸುತ್ತಾರೆ.
ತಂಡವನ್ನು ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕ ವೃಂದ, SDMC ಅಧ್ಯಕ್ಷರು ಸರ್ವಸದಸ್ಯರು, ಪೋಷಕರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಕಾರ್ಯದರ್ಶಿ ಸರ್ವಸದಸ್ಯರು ಮತ್ತು ಶಾಲಾ ವಿದ್ಯಾರ್ಥಿ ನಾಯಕ ಅಕ್ಷಯ್ ಹಾಗೂ ವಿದ್ಯಾರ್ಥಿ ವೃಂದ ಅಭಿನಂದಿಸಿ, ಜಿಲ್ಲಾ ಮಟ್ಟಕ್ಕೆ ಶುಭ ಹಾರೈಸಿದ್ದಾರೆ.
Home Uncategorized ತ್ರೋಬಾಲ್ ಪಂದ್ಯಾಟ : ಸರಕಾರಿ ಪ್ರೌಢಶಾಲೆ ಹೊಸಂಗಡಿ ವಿದ್ಯಾರ್ಥಿನಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

![SUJ02125[1]](https://tulunaduvarthe.com/wp-content/uploads/2025/09/SUJ021251-696x464.webp)