ಲಿಂ|| ಹಿರಿಯ ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಭಕ್ತಿಯಕಾಣಿಕೆಯ ಮಹಾಪೂರವೇ ಹರಿದುಬರುತ್ತಿದೆ. ಡಾ|| ಪಂಡಿತಾರಾಧ್ಯ ಸ್ವಾಮಿಗಳು.
ಗಿತರಳಬಾಳು ಮಠದ ಲಿಂ|| ಹಿರಿಯಜಗದ್ದುರು ಸಮಾಜವನ್ನುಕಟ್ಟುವ ಕೆಲಸದಲ್ಲಿಯಾವುದೇ ಅಡೆತಡೆಗಳು ಬಂದರೂಎದೆಕೊಟ್ಟು ಎದುರಿಸಿದರು. ದುಗ್ಗಾಣಿ ಮಠವೆಂದು ಅವಹೇಳನಕ್ಕೆ ಗುರಿಯಾಗಿದ್ದ ಮಠ ಮತ್ತು ಶಿಷ್ಯರನ್ನು ದುಡಿಯುವ ಮಠ, ದುಡಿಯುವ ಶಿಷ್ಯರನ್ನಾಗಿ ಮಾಡಿದಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಶಾಲಾ-ಕಾಲೇಜುಗಳನ್ನು ತೆರೆದುಜಾತ್ಯಾತೀತವಾಗಿಎಲ್ಲಾ ಮಕ್ಕಳ ಶಿಕ್ಷಣಕ್ಕೆ ನೇರವಾದವರು. ಇಅದೇ ಪರಂಪರೆಯನ್ನು ಇಂದಿಗೂ ಅನುಸರಿಸಿಕೊಂಡು ಸಾಣೇಹಳ್ಳ ಶ್ರೀ ಮಠ ಬರುತ್ತಿದೆಎಂದು ಶ್ರೀ ಡಾ|| ಪಂಡಿತಾರಾಧ್ಯ ಸ್ವಾಮಿಗಳು ಆಶೀಸಿದರು.
ಶ್ರೀಗಳು ದಿನಾಂಕ: ೨೪-೯-೨೦೨೫ ರಂದು ಸಾಣೇಹಳ್ಳಿಯಲ್ಲಿ ನಡೆಯಲಿರುವ ಹಿರಿಯ ಲಿಂಗೈಕ್ಯ ಜಗದ್ದುರುಗಳವರ ಶ್ರದ್ಧಾಂಜಲಿ ಸಭಗೆ ಭಕ್ತರುಕೊಟ್ಟ ಭಕ್ತಿ ಸಮರ್ಪಣಾಕಾರ್ಯಕ್ರಮದಲ್ಲಿ ಮೇಲಿನಂತೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶ್ರೀ ಅಣಬೇರುರಾಜಣ್ಣಅವರು ಲಿಂ. ಹಿರಿಯ ಜಗದ್ದುರುಗಳು ಈ ನಾಡುಕಂಡ ಶತಮಾನದ ಶ್ರೇಷ್ಠರು, ಹಾಗೆಯೇಅವರು ಹಾಕಿ ಕೊಟ್ಟ ಮಾರ್ಗ ಇಂದಿಗೂ ಪ್ರಸ್ತುತವಾಗಿದೆ. ಅವರು ಸಮಾಜದ ಓಳಿತಿಗಾಗಿ ಮಾಡಿದ ಕೆಲಸಗಳು ಇಂದಿನ ಎಲ್ಲಾ ಮಠದ ಸ್ವಾಮಿಗಳಿಗೆ ಮಾದರಿ. ತಮ್ಮ ೬೦ನೇ ವರ್ಷಕ್ಕೆ ಪೀಠಕ್ಕೆರಾಜೀನಾಮೆ ಸಲ್ಲಿಸಿ ತ್ಯಾಗ ಮಾಡಿದ್ದು ಪ್ರಶಂಸನೀಯಅವರAತೆಎಲ್ಲಾ ಮಠಾಧೀಶರು ಬದುಕಿ-ಬಾಳಿ ತೋರಿಸಬೇಕಾಗಿದೆ. ಸಾಣೇಹಳ್ಳಿಯಲ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಅವರಋಣತೀರಿಸಬೇಕಾಗಿದೆಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆ.ಆರ್.ಷಣ್ಮುಖಪ್ಪ ಮಾತನಾಡಿ ಇಂದಿನ ನನ್ನ ಸ್ಥಾನಮಾನಗಳಿಗೆ ಹಿರಿಯ ಲಿಂಗೈಕ್ಯ ಜಗದ್ದುರುಗಳ ಆರ್ಶಿವಾದವೇ ಕಾರಣ, ಅವರು ನಮ್ಮ ಸಮಾಜದ ಶಿಷ್ಯರನ್ನು ದುಡಿಯುವ ಶಿಷ್ಯರನ್ನಾಗಿ ಜೀವನಕ್ಕೆ ಮಾರ್ಗಮಾಡಿದ ಪುಣ್ಯಾತ್ಮರು. ಅವರ ಕಾರ್ಯಗಳಿಗೆ ನಾವು ಎಷ್ಟು ಕೊಟ್ಟರು ಸಾಲದು, ಸಮಾಜಅವರಋಣ ತೀರಿಸಿಲಾಗದಷ್ಟು ಮಾಡಿ ಹೋಗಿದ್ದಾರೆ. ಈ ಪುಣ್ಯ ಕೆಲಸದಲ್ಲಿಎಲ್ಲರೂತನು-ಮನ-ಧನಗಳನ್ನು ನೀಡಿ ಭಾಗಿಯಾಗೋಣಎಚಿಂದರು.
ಈ ಕಾರ್ಯಕ್ರಮದಲ್ಲಿಡಾ. ಬಸವಲಿಂಗ ಪಟ್ಟದದೇವರು, ಪಾಂಡೋಮಟ್ಟಿಯ ಶ್ರೀ ಡಾ. ಗುರುಬಸವ ಮಹಾಸ್ವಾಮಿಗಳು ಮತ್ತು ಅನೇಕ ಹರಗುರು ಚರಮೂರ್ತಿಗಳು, ಜೆ.ಆರ್.ಷಣ್ಮುಖಪ್ಪನವರಕುಟುಂಬ ವರ್ಗದವರು, ಮಳ್ಳೇಕಟ್ಟೆ ಸಂತೋಷ್, ಮಳ್ಳೇಕಟ್ಟೆ ಶ್ರೀನಿವಾಸ್, ಕೆ.ಬಿ. ಬಸವಲಿಂಗಪ್ಪ, ಪಲ್ಲಾಗಟ್ಟೆ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.
Home Uncategorized ಲಿಂ|| ಹಿರಿಯ ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಭಕ್ತಿಯ ಕಾಣಿಕೆಯ ಮಹಾಪೂರವೇ ಹರಿದುಬರುತ್ತಿದೆ

