ಕಲ್ಯಾ ಹಾಳೆಕಟ್ಟೆ: ಅ. 11ರಂದು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

0
151

ಭಗತ್ ಸಿಂಗ್ ಸೇವಾ ಬಳಗ ಹಾಳೆಕಟ್ಟೆ, ಕಲ್ಯಾ ಇವರ ಆಶ್ರಯದಲ್ಲಿ 50ನೇ ಯೋಜನೆಯ ಅಂಗವಾಗಿ ಅಶಕ್ತ ಮಗುವಿನ ಚಿಕಿತ್ಸೆ ಹಾಗೂ ವಿದ್ಯಾಭ್ಯಾಸಕ್ಕಾಗಿ
3ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಭಗತ್ ಸಿಂಗ್ ಟ್ರೋಫಿ – 2025 ಅ. 11ರಂದು ಸಂಜೆ ಗಂಟೆ 6.00ರಿಂದ ಗರಡಿ ಮೈದಾನ, ಕಲ್ಯಾ ಹಾಳೆಕಟ್ಟೆಯಲ್ಲಿ ನಡೆಯಲಿದೆ.

ಸಿದ್ದಕಟ್ಟೆ ಕರ್ಪೆ ಗ್ರಾಮದ ಸಿಕಾಯಿಗುಡ್ಡೆ ನಿವಾಸಿ ಸಂತೋಷ್‌ ಪೂಜಾರಿ ಮತ್ತು ಭುವನೇಶ್ವರಿ ದಂಪತಿಗಳ 3 ವರ್ಷದ ಮಗು ಸಾರ್ಥಕ್‌ ಕ್ಯಾನ್ಸರ್‌ ನಿಂದ ಬಳಲುತ್ತಿದ್ದು, ಸುಮಾರು 25 ಲಕ್ಷದ ಅವಶ್ಯಕತೆ ಇದೆ ಎನ್ನಲಾಗಿದೆ. ಆರ್ಥಿಕ ಸಹಕಾರ ನೀಡಬಯಸುವ ಸಹೃದಯಿ ದಾನಿಗಳು ನೆರವು ನೀಡಲು 9945835615 ಅಥವಾ 9119604611 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here