ವರದಿ ರಾಯಿ ರಾಜಕುಮಾರ
ಮೂಡುಬಿದಿರೆ ಇರುವೈಲು ರಸ್ತೆಯ ಬಿಜೆಎಂ ಕಾಂಪ್ಲೆಕ್ಸ್ ನಲ್ಲಿ ರೀಚೆಕ್ಸ್ ಇನ್ಫೋಟೆಕ್ ಸಂಸ್ಥೆಯನ್ನು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸದಾ ಕತ್ ಅವರು ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಉತ್ತಮವಾದಂತಹ ತರಬೇತಿ ಸಂಸ್ಥೆಯನ್ನು ಮೂಡುಬಿದಿರೆಯಲ್ಲಿ ಸ್ವ ಉದ್ಯಮದ ರೀತಿಯಲ್ಲಿ ಸ್ಥಾಪಿಸಿರುವುದು ಸಾಧನೆಯಾಗಿದೆ. ಆಸ್ನಾ ಅವರಿಗೆ ಹೆತ್ತವರು ಬೆಂಬಲವನ್ನು ನೀಡಿ ಔದ್ಯೋಗಿಕವಾಗಿ ಮುಂದುವರೆಯಲು ಪ್ರೇರೇಪಿಸಿರುವುದು ಬಹಳ ಸ್ತುತ್ಯ ಕಾರ್ಯವಾಗಿದೆ ಎಂದು ಸಂಸ್ಥೆಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಗೆ ಪ್ರೊಫೆಸರ್ ಹರೀಶ್ ಶೆಟ್ಟಿ ಅವರು ಮಾತನಾಡಿ ಮೂಡುಬಿದಿರೆಯಲ್ಲಿ ಮೊಟ್ಟಮೊದಲಾಗಿ ಇಂತಹ ತರಬೇತಿ ಸಂಸ್ಥೆ ಆರಂಭಿಸುತ್ತಿರುವುದಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಂದಾಳುಗಳಾದ ಅಶ್ಫಕ್, ಶಹನಂ, ಜಾನ್ಸಿ, ಹಾಗೂ ಇತರರು ಹಾಜರಿದ್ದರು. ಸಂಸ್ಥೆಗೆ ಸೇರುವ ಮೊದಲ ತರಬೇತಿ ಗುಂಪಿಗೆ 50 ಶೇಕಡ ರಿಯಾಯಿತಿಯನ್ನು ಒದಗಿಸಲಾಗುವುದು ಎಂದು ತಿಳಿಸಲಾಯಿತು.
ಸಂಸ್ಥೆಯ ಮುಖ್ಯಸ್ಥೆ ಅಸ್ನಾ ಸ್ವಾಗತಿಸಿದರು. ಶಶಾಂಕ್ ಕಾರ್ಯಕ್ರಮ ನಿರ್ವಹಿಸಿದರು. ಆಶಿಕಾ ವಂದಿಸಿದರು.


