“ಸರ್ವ ಧರ್ಮ ಸೌಹಾರ್ದತೆಯನ್ನು ಜಗತ್ತಿಗೆ ನೀಡಿದ ದೇಶ ಭಾರತ.” ಭಾರತಭೂಷಣ ಸ್ವಸ್ತಿ ಶ್ರೀ ಚಾರುಕೀರ್ತಿಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ

0
64


ಮಾನವ ಮಾನವನಾಗಿರಬೇಕು. ದಾನವೀಯ ಪ್ರವೃತ್ತಿಗಳ ಆಗರವಾಗಬಾರದು. ಧರ್ಮದ ಮರ್ಮವನ್ನರಿತು ಬದುಕಿದರೆ ಶಾಂತಿ ಸಾಮರಸ್ಯದ ಜೀವನ ಸಾಧ್ಯ ಎಂದು ಮೂಡಬಿದಿರೆಯ ಪರಮಪೂಜ್ಯ ಭಾರತಭೂಷಣ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರು ಅಭಿಪ್ರಾಯಪಟ್ಟರು ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಜರಗಿದ ಸರ್ವ ಧರ್ಮ ಅರಿವು ಸಮ್ಮಿಲನ-೨೦೨೫ನ್ನು ಉದ್ಘಾಟಿಸಿ ಮಾತನಾಡಿದ ಪೂಜ್ಯ ಸ್ವಾಮೀಜಿಯವರು “ಸನಾತನ ಕಾಲದಿಂದಲೂ ಭಾರತೀಯ ಭೂಮಿ ಸರ್ವ ಧರ್ಮಗಳಿಗೂ ನೆಲೆಬೀಡಾಗಿದೆ. ಸರ್ವ ಧರ್ಮ ಸೌಹಾರ್ದತೆಯ ಔದಾರ್ಯತೆ ಭಾರತೀಯರಲ್ಲಿದೆ. ಪ್ರತೀ ಧರ್ಮದ ಮುಖ್ಯ ಧ್ಯೇಯ ನೈತಿಕತೆ, ಪರಿಶುದ್ಧತೆಯ ಬದುಕನ್ನು ಬದುಕುವುದಾಗಿದೆ. ಎಲ್ಲಾ ಧರ್ಮ ಗ್ರಂಥಗಳು ಹೇಳಿರುವುದು ಸಮಾಜದಲ್ಲಿರುವಂತದ ಕೆಟ್ಟ ಗುಣಗಳನ್ನು ಯಾವ ರೀತಿಯಲ್ಲಿ ತೊಡೆದು ಹಾಕಬಹುದು ಎಂಬುದನ್ನು.” ಇದನ್ನು ನಾವು ಅರಿತು ಬದುಕಿನಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.


ಕಾರ್ಯಕ್ರಮದ ಅಂಗವಾಗಿ ಕ್ರೆöÊಸ್ತ ಧರ್ಮದ ಸಂದೇಶವನ್ನು ಸಾರಿದ ಫಾ| ಮೆಲ್ವಿನ್ ನೊರೊನ್ಹಾ ಅವರು ಪ್ರೀತಿಗೋಸ್ಕರ ಉದಿಸಿದ್ದು ಕ್ರೆöÊಸ್ತ ಧರ್ಮ. ಏಸುಸ್ವಾಮಿ ಪ್ರತಿಯೊಬ್ಬನನ್ನು ಪ್ರೀತಿಸಿದರು. ಅವರು ಪ್ರೀತಿಸಿದ್ದು ಮಾನವ ಧರ್ಮವನ್ನು, ಜನರನ್ನು, ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು. ಧರ್ಮವೊಂದು ನೀತಿ, ಧರ್ಮವೊಂದು ರೀತಿ, ಧರ್ಮವೊಂದು ಕರುಣೆ ಎಂಬುವುದು ಏಸುಸ್ವಾಮಿಯ ಅಭಿಪ್ರಯವಾಗಿತ್ತು. ಪ್ರೀತಿ, ನೀತಿ, ಮಾನವೀಯತೆಯ ಪ್ರತಿಬಿಂಬವೇ ಕ್ರೆöÊಸ್ತ ಧರ್ಮ. ಕರುಣೆ ಇಲ್ಲದ ಧರ್ಮ ಜಗತ್ತಿಗೆ ಯಾವ ಸಂದೇಶವನ್ನೂ ಕೊಡಲು ಸಾಧ್ಯವಿಲ್ಲ. ಹಸಿದಾಗ ಅನ್ನ, ದಣಿವಾದಾಗ ನೀರು ಕೊಡುವುದೇ ನಿಜವಾದ ಧರ್ಮವೆಂದು ತಿಳಿಸಿದರು.
ಮಂಗಳೂರಿನ ಮಸ್ನವೀ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಬ್ದುಲ್ ರಶೀದ್ ಝೈನೀ ಸಖಾಫಿ ಇವರು “ಇಸ್ಲಾಂ ಧರ್ಮದ ಸಂದೇಶವನ್ನು ತಿಳಿಸುತ್ತಾ ಸಲಾಂ ಎಂದರೆ ಶಾಂತಿ, ಹಾಗೂ ಸೌಹಾರ್ದತೆಯ
ತತ್ವವನ್ನೇ ಪೈಗಂಬರರು ಜಗತ್ತಿಗೇ ಬೋಧಿಸಿದರು. ಬಾಂಗ್ ಎನ್ನುವುದು ಯಶಸ್ಸು, ಸಮೃದಿದ್ಧ್, ಒಗ್ಗಟ್ಟಿನ ಸಂಕೇತವನ್ನು ನೀಡುವಂತಹದ್ದು. ಪರೋಪಕಾರವನ್ನು ಮಾಡಿ, ದೌರ್ಜನ್ಯ ಬೇಡ ಎಲ್ಲರಿಗೂ ಒಳಿತನ್ನು ಮಾಡಿ ಎನ್ನುವುದೇ ಖುರಾನ್‌ನ ಮೂಲಮಂತ್ರ. ಇಂತಹ ಸರ್ವಧರ್ಮ ಅರಿವು ಕಾರ್ಯಕ್ರಮವನ್ನು ಯುವ ಜನತೆಗೆ ಕಳೆದ ಹತ್ತು ವರ್ಷಗಳಿಂದ ನೀಡುವ ಮೂಲಕ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ” ಎಂದು ತಿಳಿಸಿದರು. ಸನಾತನ ಹಿಂದೂ ಧರ್ಮದ ಸಾರವನ್ನು ಮಕ್ಕಳಿಗೆ ತಿಳಿಸಿ ಮಾತನಾಡಿದ ಎಸ್.ಎನ್.ಎಮ್ ಪೊಲಿಟೆಕ್ನಿಕ್ ಮೂಡುಬಿದಿರೆ ಇಲ್ಲಿಯ ಉಪನ್ಯಾಸಕರಾದ ಡಾ. ಎಸ್.ಪಿ.ಗುರುದಾಸ್ ಇವರು, “ಧರ್ಮಗಳಲ್ಲಿರುವ ಸತ್‌ವಿಚಾರಗಳನ್ನರಿತು ಬದುಕಿನಲ್ಲಿ ಅಳವಡಿಸಿ ನಡೆಯುವುದೇ ಧರ್ಮದ ರಕ್ಷಣೆ. ಎಲ್ಲಾ ಧರ್ಮಗಳ ಅಂತಿಮ ಸಂದೇಶ ಮಾನವ ಜನಾಂಗದ ಕಲ್ಯಾಣವೇ ಆಗಿದೆ. ಅಹಂಕಾರ ದರ್ಪಗಳನ್ನು ಬಿಟ್ಟು ಪ್ರತಿಫಲಾಪೇಕ್ಷೆ ಇಲ್ಲದೆ ಬದುಕು ಸಾಗಿಸಿದರೆ, ನೈಜಾರ್ಥದಲ್ಲಿ ಧರ್ಮದ ಪಾಲನೆಯಾದಂತೆ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಇವರು “ಸಮಾಜಕ್ಕಾಗಿ ಬದುಕಿ, ಅಹಂಕಾರ ತ್ಯಜಿಸಿ, ಶಾಂತಿಯ ಮಂತ್ರ ಪಠಿಸಿ, ಪರೋಪಕಾರದ ಮೂಲಕ ಸಮಾಜದ ಆಸ್ತಿಗಳಾಗಿ, ಈ ಕಾರ್ಯಕ್ರಮದ ಸಂದೇಶವನ್ನು ಜೀವನದುದ್ದಕ್ಕೂ ಅಳವಡಿಸಿ ದೇಶದ ಸತ್ಪçಜೆಗಳಾಗಿ” ಎಂದು ಮಕ್ಕಳಿಗೆ ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ವಂದಿಸಿದರು. ಜಯಶೀಲ ಹಾಗೂ ಜಯಲಕ್ಷ್ಮೀ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ , ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here