ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಧಾನ ಕವಿಗೋಷ್ಠಿಗೆ ರಘುಇಡ್ಕಿದು ಆಯ್ಕೆಯಾಗಿದ್ದಾರೆ.
2025ರ ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಧಾನ( ಪ್ರಬುದ್ಧ ) ಕವಿಗೋಷ್ಠಿಗೆ ಸಾಹಿತಿ, ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿರುವ ರಘು ಇಡ್ಕಿದು ಆಯ್ಕೆಯಾಗಿದ್ದಾರೆ.
ತುಳು ಮತ್ತು ಕನ್ನಡ ಭಾಷೆಗಳಲ್ಲಿ ಇವರ 32 ಕೃತಿಗಳು ಪ್ರಕಟವಾಗಿದ್ದು, ಕಥೆ,ಕವನ,ನಾಟಕ,ವಿಮರ್ಶೆ, ರೂಪಕ, ಅನುವಾದ, ಮಕ್ಕಳ ಸಾಹಿತ್ಯ, ವ್ಯಕ್ತಿ ಚಿತ್ರ,ಅಂಕಣ ಬರಹ, ಭಾವಗೀತೆ, ಗಜಲ್ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ನಿರಂತರವಾಗಿ ಬರೆಯುತ್ತಿದ್ದಾರೆ.
ದಿನಾಂಕ 27.09.2025ರಂದು ಈ ಪ್ರಧಾನ ಕವಿಗೋಷ್ಠಿಯಲ್ಲಿ ತುಳುನಾಡನ್ನು ಪ್ರತಿನಿಧಿಸುವ ಮೂಲಕ ಅವರು ತುಳು ಕವನವನ್ನು ಪ್ರಸ್ತುತಪಡಿಸಲಿದ್ದಾರೆ.