ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಮತ್ತು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಸಮಿತಿಯ ಜಂಟಿ ಆಶ್ರಯದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ.ಕಾಸರಗೋಡು ಜಿಲ್ಲಾ ಸಮಿತಿಯ ಸಹಕಾರದಲ್ಲಿ ಕಾಸರಗೋಡಿನ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ಕ್ಷೇತ್ರದಲ್ಲಿ ಸೆ. 27ರಂದು ಅಪರಾಹ್ನ 1.30ರಿಂದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ನಡೆಯಲಿದೆ.
ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ.ಕೊಳ್ಚಪ್ಪೆ ಗೋವಿಂದ ಭಟ್ ಉದ್ಘಾಟಿಸುವರು. ಸಾಹಿತಿ ಡಾ. ಸುರೇಶ್ ನೆಗಳಗುಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೊಡಗು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕರಾದ ಪ್ರಾಧ್ಯಾಪಕ ಜಯಾನಂದ ಪೆರಾಜೆ, ಶಿಕ್ಷಕಿ ಡಾ. ಶಾಂತ ಪುತ್ತೂರು, ಶಿಕ್ಷಕಿ ರೇಖಾ ಸುದೇಶ್ ರಾವ್, ಶೋಭಾ ದಿನೇಶ್ ಉದ್ಯಾವರ ಭಾಗವಹಿಸುವರು. ಶ್ರೀಕ್ಷೇತ್ರದ ಪಾತ್ರಿಗಳಾದ ಪಾಂಗೋಡು ಪ್ರವೀಣ ನಾಯಕ, ಶ್ರೀಕ್ಷೇತ್ರದ ಅಧ್ಯಕ್ಷ ನಾಗೇಶ್ ಪಿ ನಾಯಕ, ಸಾಂಸ್ಕೃತಿಕೋತ್ಸವದ ರೂವಾರಿ ಡಾ. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್, ವಿರಾಜ್ ಅಡೂರು, ವಸಂತ ಕೆರೆಮನೆ ಮೊದಲಾದವರು ಭಾಗವಹಿಸುವರು. ಈ ಸಂದರ್ಭದಲ್ಲಿ ಕೆ. ನರಸಿಂಹ ಭಟ್ ಏತಡ್ಕ, ಪ್ರಭಾವತಿ ಕೆದಿಲಾಯ ಪುಂಡೂರು, ವಿಜಯರಾಜ ಪುಣಿಂಚಿತ್ತಾಯ ಬೆಳ್ಳೂರು. ಶಶಿಕಲಾ ಟೀಚರ್ ಕುಂಬ್ಳೆ, ಆದ್ಯಂತ್ ಅಡೂರು, ಡಾ. ಸುರೇಶ್ ನೆಗಳಗುಳಿ, ಲಕ್ಷ್ಮಿ ವಿ ಭಟ್, ಚಿತ್ರಕಲಾ ದೇವರಾಜ ಆಚಾರ್ಯ ಸೂರಂಬೈಲ್, ಕೆ. ಎಸ್ ಮಂಜುನಾಥ ಹರಿಹರಪುರ, ರೇಖಾ ಸುದೇಶ್ ರಾವ್, ಶೋಭಾ ದಿನೇಶ್ ಉದ್ಯಾವರ ಇವರಿಗೆ ಕಾಸರಗೋಡು ದಸರಾ ಕವಿ ಸಾಧಕ ಪ್ರಶಸ್ತಿ-2025 ಪ್ರದಾನ ಮಾಡಲಾಗುವುದು. ನಂತರ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ವೇದಿಕೆಯಲ್ಲಿ ನಡೆಯುವ -ಕಾಸರಗೋಡು ದಸರಾ ಕವಿಗೋಷ್ಠಿ- 2025ರಲ್ಲಿ ಶ್ವೇತಾ ಡಿ ಬಂಟ್ವಾಳ, ಶ್ಯಾಮಲಾ ರವಿರಾಜ್ ಕುಂಬ್ಳೆ, ವೃಂದ ಬಡಗಬೆಳ್ಳೂರು ಬಂಟ್ವಾಳ, ಕುಶಿ ಬಡಗಬೆಳ್ಳೂರು ಬಂಟ್ವಾಳ, ಹೇಮಂತ್ ಕುಮಾರ ಡಿ ಬಂಟ್ವಾಳ, ಸವಿತಾ ಕರ್ಕೇರ ಕಾವೂರು, ಮಲ್ಲಿಕಾ ಬಿ ಎಸ್ ರೆಂಜತಮೂಲೆ, ಪೆರ್ಲ, ಶೋಭಾ ದಿನೇಶ್ ಉದ್ಯಾವರ ಉಡುಪಿ, ಎಂ. ಎ. ಮುಸ್ತಫಾ ಬೆಳ್ಳಾರೆ, ಮೋಹನದಾಸ್ ಅನ್ನೆಪಲ್ಲಡ್ಕ , ಗಿರೀಶ್ ಪೆರಿಯಡ್ಕ ಉಪ್ಪಿನಂಗಡಿ, ಪ್ರಿಯಾ ಬಾಯಾರು, ಸುಜಿತ್ ಕುಮಾರ ಬೇಕೂರು, ರೇಖಾ ರೋಶನ್ ಕಾಸರಗೋಡು, ರಾಧಾಕೃಷ್ಣ ಭಟ್ ಕುರುಮುಜ್ಜಿ, ಶಶಿಕಲಾ ಟೀಚರ್ ಕುಂಬಳೆ, ಮಾಲತಿ ಬೆಂಗಳೂರು, ಜ್ಯೋತ್ಸ್ನಾ ಕಡಂದೇಲು, ನಿವೇದಿತಾ ಪ್ರಶಾಂತ್, ಆದ್ಯಂತ್ ಅಡೂರು, ಉದಯಶಂಕರ ಕಿಳಿಂಗಾರು ಮೊದಲಾದವರು ಭಾಗವಹಿಸುವರು.

